Tuesday, 6 May 2014

ಓ ಗೆಳತಿ .ಅವಳಾಣತಿಯಂತೆ ನಾ ಇಂದು
ನಾ ಅವಳಾಗಿ ಹೇಳಬಯಸುವೆ
ಮನನೊಂದು ಗೆಳತಿ .... .. :-)

ಕನಸುಗಳ ಕೈ ಜಾರಿಸಿ, ಕಂಕಣಕೆ
ಕೈ ಸೇರಿಸಿ, ಹೆತ್ತವರ ಆಣತಿಯಂತೆ
ಶ್ರೀಮತಿಯ ಪಟ್ಟ ಅಲಂಕರಿಸಿದೆ ನಾ

ಮನ್ಸಸೋತ ಮನ ಬಿಗಿಹಿಡಿದು
ಹೃದಯ, ಮದುವೆ ಮಂಟಪದಲ್ಲಿ
ಬಂದು ಹರಸಿತು ನನ್ನ ಅಂದು.

ಅವರ ದೌರ್ಜನ್ಯಕ್ಕೆ ಸಿಲುಕಿ
ಮನೆ-ಮಾನಗಳಿಗೆ ತಲೆಬಾಗಿ
ಅರಮನೆಯ ಬಂದಿ ಆಗಿರುವೆ ನಾ

ಅರಿಸಿನದ ಗುಂಗು, ಮದರಂಗಿಯ
ರಂಗು ಆರುವ ಮುನ್ನವೇ
ಲಬಿಸಿದೆ ಏಕಾಂಗಿತನ,

ಬಿಂಕದ ಕನಸುಗಳು ಕಣ್ಣು ಸೀಳುತಿವೆ ನಿದಿರೆ ಇಲ್ಲ,
ಹೊರಡ ಬೇಕೆನಿಸಿದೆ ಈಗ ಯಾರು ಇಲ್ಲದೂರಿಗೆ,
ಯಾರು ಹಿಂಬಾಲಿಸಲಾಗದ ದಾರಿಯಲಿ.

-ನಗೆಮಲ್ಲಿಗೆ