Saturday, 12 April 2014

ಆತನ ಆಟ ಬಲ್ಲವರಾರುಕಾಸಗಲದ ಚಿನ್ನಕೆ
ಇಲ್ಲದಾಯಿತು
ಬೆಸುಗೆಯ
ಬಂಧಿಸುವ ಯೋಗ


ಕರಿಮಣಿಗೂ
ಸಿಗದೇ ಹೋಯಿತು
ಕೊರಳಿಗೇರುವ
ಅವಕಾಶ


ಚಪ್ಪರ, ಬಾಳೆ-ಮಾವು,
ಅರಿಸಿನ, ಮಂಟಪ'
ವಾದ್ಯಗಳಿಗು ದೊರಕದೇ
ಹೋಯಿತು ಅದೃಷ್ಟ


ಹಾರಕ್ಕು ಮಣಿಯಲಿಲ್ಲ
ಹರೆಯದ ಶಿರ,
ಉಂಗುರಗಳಿಗಂತೂ
ಜಾಗವೇ ಅಲ್ಲಿರಲಿಲ್ಲ


ಕಾಲನು ಮಾತ್ರ ಬಿಡಲಿಲ್ಲ
ಸೇರಿಸಿಯೇ ಬಿಟ್ಟ
ಹೆಸರಿಡದೆ
ಹೊರಟ


ಪಶ್ಚಾತಾಪದ
ಕೋಣೆಯಲ್ಲಿ
ಬಂದಿಯನ್ನಾಗಿಸಿ
ಅವಳ

-ನಗೆಮಲ್ಲಿಗೆ