Friday 28 March 2014

ಮರಳಿ ಬರುವೆ :-)

https://www.facebook.com/photo.php?fbid=712308945459285&set=a.341574982532685.78542.100000405589483&type=1&theater ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆ..... nanna dondu Kavana Panjuvinalli

ರಸ್ತೆ ಬದಿಯಲ್ಲಿರುವ ಮನೆ ನಮ್ಮದು 

ಊರಿಗೆ ಬರ್ತೀನಿ ಅಂತ ಹೇಳುದ್ರೆ 
ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆ
http://www.panjumagazine.com/
 — 

ರಸ್ತೆ ಬದಿಯಲ್ಲಿರುವ ಮನೆ ನಮ್ಮದು 
ಊರಿಗೆ ಬರ್ತೀನಿ ಅಂತ ಹೇಳುದ್ರೆ
ಬರೊ ಬಸ್ಸುಗಳನೆಲ್ಲ
ನೋಡುತ ... ಕಾದು ನಿಂತಿರ್ತಾರೆ
ಅಪ್ಪ .. ಅಮ್ಮ .. ಅಕ್ಕ

ಬಸ್ಸು ಇಳಿದ ತಕ್ಷಣ
ಚನ್ನಾಗಿದಿಯ ? ಈಗ ಬಂದ ?
ಅಂತ ಮಾತಾಡಿಸೋ ಅಕ್ಕ ಪಕ್ಕದ
ಮನೆಯವರು ... :)

ದೂರದ ಮನೆ ಅವಳದು
ನನ್ನ ಬರುವಿಕೆಯ ಕಾಯೋ
ಮತ್ತೊಂದು ಚಾತಕ ಪಕ್ಕ್ಷಿ,
ಬಾಲ್ಯದ ಗೆಳತಿ ...

ಪಕ್ಕದ ಬಯಲು ರಂಗ
ಗೋಲಿ, ಲಗೋರಿ, ಕೋಲು ಕುಟಿಕ
ಹೀಗೆ ಹಲವಾರು ಆಟ ಆಡಿ ಸೋತು ಗೆದ್ದು
ನಕ್ಕು ನಲಿದು ಹೊರಳಾಡಿದ ಕ್ಷಣಗಳು

ಆಲೆಮನೆಯ ಬೆಲ್ಲದ ಪಾಕ
ಕದ್ದು ತಿಂದ ಹಲಸಿನ ಹಣ್ಣು
ಸಿಬೆ , ಮಾವಿನ ಹಣ್ಣು
ಸಿಕ್ಕಿ ಬಿದ್ದಾಗ ತಿಂದ ಒದೆಗಳು

ಹಾಗೆ ಕಣ್ ಮುಂದೆ ... ಒಂದು ಸಿನಿಮಾ ರೀತಿ
ಮುಂದೆ ಬಂದು ನಿಲ್ಲೋ  ಆ ದೃಶ್ಯಗಳು
ಅಬ್ಬಾ ..!!!! ಬೀದಿ ನಾಟಕ, ದೊಂಬರಾಟ
ಹೀಗೆ ಹತ್ತು ಹಲವಾರು ....

ಎರಡೇ ದಿವಸಕ್ಕೆ ಬಿಟ್ಟು ಬಾರೋ
ಮನಸ್ಸಿಲ್ಲ ಎಲ್ಲವನ್ನು, ಎಲ್ಲರನ್ನು, ಮತ್ತೆ
ಮತ್ತೆ ಅಲ್ಲೇ ಕುಳಿತು 
ಮೆಲುಕು ಹಾಕಬೇಕು ಅನ್ನಿಸುತ್ತೆ .... !!!!

ಆದರು ಮಾರನೆದಿನ ಮಹಾನಗರಿಯಲ್ಲಿ...!!!!!


(ತಿಳಿಯಲೇ ಬೇಕಾದ ವಿಷಯ ಅಂದ್ರೆ ಅಂದು ಅಂದಿಗೆ ಇಂದು ಇಂದಿಗೆ ಇರಲಿ ನಾಳೆ ನಾಳೆಗೆ )
ಗತಕಾಲ ನೆನಪು ಅಸ್ಟೇ ಎಂದೆಂದಿಗೂ

-ನಗೆಮಲ್ಲಿಗೆ
(ಅನುಪಮ ಎಸ್ ಗೌಡ)

4 comments:

  1. ಹಳೇ ಮೈಸೂರು ಪರಿಸರದ ನವಿರಾದ ನಿರೂಪಣೆ ಮತ್ತು ಊರು ನೆನಪು ಇಷ್ಟವಾದವು. ಧನ್ಯವಾದಗಳು ಪಂಜು.

    ReplyDelete
  2. Nice.. ellarigu tamma tamma halli nenapiso kavana :)

    ReplyDelete
  3. ಪಂಜುವಿನ ವಿಶ್ವ ಕವಿತಾ ದಿನದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಒಳ್ಲೆಯ ಕವನವಿದು.
    ನಿಮ್ಮ ಮಾತು ನಿಜ ಗತಕಾಲ ನೆನಪು ಸವಿಯಲು ಮಾತ್ರ!

    ReplyDelete
  4. ಗತಕಾಲವೇ ಹಾಗೇ ನೆನಪಿನ ಸಂದಿಯಲ್ಲಿ ಗಟ್ಟಿಯಾಗಿ ನಿಂತು ಬಿಡುತದೆ .
    ಧನ್ಯವಾದಗಳು ... Pradeep and Badari sir

    ReplyDelete