Saturday, 17 May 2014

ಹೊಸ ಸರಕಾರದ ಮುನ್ನುಡಿಗೆ ಮುನ್ನ :-)

ಸೋಲು ಗೆಲುವಿನ ಲೆಕ್ಕಚಾರಕ್ಕೆ ಒಂದು ಸವಾಲ್ ..... ಜನತೆ ಬದಲಾವಣೆ ಬಯಸಿದ್ದು ಇದಕ್ಕಾಗಿ. ನಿಜವಾದ ಪ್ರಜಾಪ್ರತಿನಿಧಿಗಳಾಗಿರಿ ..... ಹೊಸ ಸರಕಾರದ ಮುನ್ನುಡಿಗೆ ಮುನ್ನ :-)

ಸರಕಾರ ಯಾರದ್ದೇ ಬರಲಿ 
ಪ್ರಧಾನಿ ಯಾರೇ ಆಗಲಿ
ದೇಶದ ಬೆನ್ನೆಲುಬು,
ಅನ್ನದತನಿಗೆ ಮನ್ನಣೆ ಸಿಗಲಿ
ಅಲೆ ಸುನಾಮಿ ಯಾವುದೇ
ಆಗಿರಲಿ,ಬ್ರಷ್ಟಚಾರ
ಕಳಂಕದ ಕೊಲೆ ತೊಳೆಯುವ
ಮನೋಭಾವವಿರಲಿ
ಬಡವರು, ಬುಡಕಟ್ಟು ಜನರು
ನಿರಾಶ್ರಿತರು, ಆನಾಥರಿಗೆ
ಅಂಧರಿಗೆ ಅನ್ನಾ, ಆಶ್ರಯಕ್ಕೆ ನೆರವಗೋ 
ಕೈಗಳು ನಿಮ್ಮದಾಗಲಿ
ಪರಕೀಯರ ಎದುರು ಭಾರತದ
ರೂಪಾಯಿಗೆ  ಒಳ್ಳೆ ಮೌಲ್ಯ ಸಿಗಲಿ
ದೇಶದ ಆರ್ಥಿಕತೆ ಸುಧಾರಿಸುವ
ಸಾಮರ್ಥ್ಯ ನಿಮ್ಮದಾಗಲಿ
ಸುಸಜ್ಜಿತ ಸುಭದ್ರ, ಶೈಕ್ಷಣಿಕ
ಸಾಮಾಜಿಕ, ಸಾಂಸ್ಕೃತಿಕ
ಸರ್ವಧರ್ಮೀಯ ಸಂಘಟಿತ ಸಮಾಜ ನಿರ್ಮಾಣ
ಮಾಡೋ ಹೊಣೆಯ ನಿಮ್ಮದೇ
ಮತದಾರ ಪ್ರಭುವಿನ ಆಜ್ಞೆ ಎಂದೇ
ತಿಳಿರಿ ಚಿಂತಇಲ್ಲ, ಶಾಶ್ವತ ಅಲ್ಲ
ನಿಮ್ಮ ಅಧಿಕಾರ, ಸದುಪಯೋಗ ಪಡಿಸಿಕೊಳ್ಳಿ
ಜನತೆಯ ಆಶಯ ಹಾರೈಕೆ ಇದೆ .

-ನಗೆಮಲ್ಲಿಗೆ