Tuesday, 20 May 2014

ಸಂಜ್ಜೆ ರಾಗಗಳೆ ಹಾಗೇ ಸಂಧ್ಯಾ ರಾಗಗಳಂತಲ್ಲ ಸೆಳೆತಕ್ಕೆ ಸಿಕ್ಕಿ ಬಿಡುವತ್ತೇ :)ಒಂದಷ್ಟು ಆಲೋಚನೆಗಳು ನಾವು ಬಿಟ್ಟ್ರು , ನಮ್ಮನ ಬಿಡೋದಿಲ್ಲ. ಹಾಗೆ ಕೆಲವು ವ್ಯೆಕ್ತಿಗಳು ಕೂಡು ಮರೆತ್ರು  ನೆನಪಲ್ಲೇ ಇರೋಹಾಗೆ ಇರ್ತಾರೆ. ಕೆಲಸ ಮಾಡೋ ನಮಂತಹ ಕೆಲವರಿಗೆ ಮನೆನಲ್ಲಿ ಇದ್ದರೆ ಮನೆಯೇ ನನ್ನ ಪ್ರಪಂಚ, ಆಫೀಸಿಗೆ ಬಂದ್ರೆ ಆಫೀಸೆಯೇ ಪ್ರಪಂಚ, ಸ್ನೇಹಿತರ ಜೊತೆ ಇದ್ದಾಗ ಸ್ನೇಹಿತರೆ ಪ್ರಪಂಚ ಇಸ್ಟೊಂದು ಪ್ರಪಂಚ
ಗಳನ್ನ ಸುತ್ತುತಾ ಇರೋ ನಮ್ಮ ಪ್ರತಿಕ್ಷಣ ಹಿಂಬಾಲಿಸೋ ಅಂತವರ  ನೆನಪು ಮಾತ್ರ ಎಲ್ಲದರಲ್ಲೂ ಯಾವಾಗಲು ಜೊತೇನೆ ಇರುತ್ತೆ. ಸುತ್ತಾಟ ಹರಟೆ ತಮಾಷೆ ಜಗಳ ಇದೆಲ್ಲದರ ಹಿಂದೆ ಮೌನವಾಗಿ ಕಾಡೋ ಅವ್ರ ಮಾತುಗಳು, ನಗು, ತಮಾಷೆ  ಎಲ್ಲವು ಒಮ್ಮೆ ಎದೆಯೊಳಗೆ ಸುನಮಿಯನ್ನೇ ಎಬ್ಬಿಸಿ ಬಿಡುತ್ತವೆ ಕೆಲಒಮ್ಮೆ.

ಬನ್ನಿ ಸಂಜೆಗಳ ಸರದಿಯಲಿ ಸುರಿರೋ ಅಂತಹವರ ನೆನಪುಗಳ ನೆನೆಯೋಣ ಅಂತರವ ಮರಿಯೋಣ .....