Tuesday, 20 May 2014

ಹನಿಗವನಗಳು

 
ಕೆಂಪಿಲ್ಲದಿದ್ದರೇನು
ಅತ್ತಿ ಹಣ್ಣಿನಂತಲ್ಲ ಮನಸ್ಸು
ನೇರಳೆಯ ಬಣ್ಣವಾದರೇನು 
ನೇರ ನಡೆ-ನುಡಿ ಅವನದು. 
 *************
ಶೃಂಗಾರ
ಕವಿಯೊಬ್ಬನಿಗೆ
ಲಬಿಸಿದ
ರಸಹೀನ
ರಾತ್ರಿಗಳೇ
ಹೆಚ್ಚು  
************
ಚಿಪ್ಪು ಮುಚ್ಚಿಡಲೇ
ಬೇಕು ಹನಿಯ ಅದು
ಮುತ್ತಾಗಬೇಕಾದರೆ 
************
ಮಳೆಬರದೆ ಕಾಡಿ,
ತಂಗಾಳಿಯೊಡನೆ
ಸರಸವಾಡುತಿರುವ
ಪ್ರತಿ ಸಂಜೆಗಳು
ರೋಚಕ ಮತ್ತು
ರೋಮಾಂಚಕವೇ ಸರಿ
********************
 
ನೀನು ಸಾಲ ಕೊಟ್ಟು ಹೋದೆಯೋ , 
ಅಡವಿಟ್ಟು ಹೋದೆಯೋ ಗೊತ್ತಿಲ್ಲ 
ನಾನು ಮಾತ್ರ ಅಕ್ಷರ ರೂಪದಲ್ಲಿ 
ಭಾವನೆಗಳಿಗೆ ಬಡ್ಡಿ ಕಟ್ಟುತಲೇ 
ಇರುವೆ ಆಗ, ಈಗ ಯಾವಾಗಲು 
**********************
ನೀ
ಬಳಿ ಇರದ
ಸಮಯವ ಬಣ್ಣಿಸಲು
ಆದಾವ ವಿರಹ ಗೀತೆಯೂ
ತೋಚುತಿಲ್ಲ,
ನಾನೇ ಒಂದು ಗೀತೆ
ರಚಿಸಿ ಬಿಡಲ
ಅನುಮತಿಕೊಟ್ಟರೆ ನೀನು  ?
 ************************
"ನನ್ನ
ಕಣ್ಣಿನಿಂದ
ಕಡೆಗೂ
ಜಾರುತ್ತಿರುವ
ನತದೃಷ್ಟ
ಕಂಬನಿ
ನೀನೆ"