Friday, 6 June 2014

ಕಳೆದ ವಾರ ಪಂಜುವಿನಲ್ಲಿ ಪ್ರಕಟ ಆದ ಒಂದು ಕವನ

http://www.panjumagazine.com/?p=7475http://www.panjumagazine.com/?p=7475

ಕಳೆದ ವಾರ ಪಂಜುವಿನಲ್ಲಿ ಪ್ರಕಟ ಆದ ಒಂದು ಕವನ 

ವಿಥ್ ಆಡಿಯೋ 

?
ನಾ ನಿನ್ನ ಮರೆತು,
ತೊರೆಯ ಹೊರಟರೆ ತಾಯಿ 
ತನ್ನ ಮಗುವನ್ನು ತೊರೆದಂತೆ 

ಮರ ತನ್ನ ಬೇರನ್ನು ತಾನೇ
ಕಡಿದುಕೊಂಡಂತೆ, ಜೀವ
ದೇಹವನ್ನು ಬಿಟ್ಟು ಹೋದಂತೆ

ಮೌನದಲ್ಲೇ ನೀವೆದನೆ 
ಮಾಡುವೆ, ಹಿಂಪಡಿ 
ನಿನ್ನ ಚತುರ ಮಾತುಗಳನು

ತಾಯಾಗಿ ಸಲಹುವಾಸೆ 
ಮಡಿಲ ಒಡ್ಡುವೆ ಮಗುವಾಗಿ 
ಮಲಗಿಬಿಡು ದಿಗಿಲುಬೇಡ

ಪಾಪದತ್ಮಗಳಿಗೆ ಕಟ್ಟೋ 
ಪುಣ್ಯದೆಸರಿನ ಗೋರಿಯಲ್ಲ 
ಅನುಪಮ ಒಲವ ತಿಜೋರಿ 

 -ನಗೆಮಲ್ಲಿಗ