Friday 14 March 2014

ವಾಸ್ತವ

ಬದುಕು ಗೋರಿಯಲ್ಲಿ 
ಕೊನೆಯಾಗುವ 
ಮುನ್ನ 
ಗುರಿ ತಲುಪು   
ನೀ
******
ಮಧ್ಯರಾತ್ರಿ 
ಎದ್ದುಹೋದ 
ಅವರು 
ಬುದ್ಧನ 
ಅನುಯಾಯಿಗಳಲ್ಲ 
ತಂದೆ-ತಾಯಿಗಳ 
ಬುದ್ಧಿ ಮಾತುಕೇಳದ 
ಪ್ರೇಮಿಗಳು
 
********

ಮರದಿಂದ ಮರಕ್ಕೆ ಹಾರೋ
ಮಂಗನಿಗೂ .... ಪಕ್ಷದಿಂದ
ಪಕ್ಷಕ್ಕೆ ಹಾರೋ ಪ್ರತಿನಿಧಿಗಳಿಗೂ
ಬಾಲ ಇಲ್ಲದೇ ಇರೋದ್
ಒಂದೇ ವೆತ್ಯಾಸ

-ನಗೆಮಲ್ಲಿಗೆ

No comments:

Post a Comment