Friday, 7 February 2014

ನಿನ್ನ ಸಾಲು ಸಾಲಿಗೂ
ಸೋತೆ, ಸಾಲ ಕೊಡು
ಒಂದೊಳ್ಳೆ ಕವಿತೆ
**********

ನಿನಗಾಗಿ 
ಮುಡಿಪಿಡುವೆ 
ತನು ಮನ

ಸೋತು ಗೆದ್ದ  ಒಲವಿಗೆ  ಮುತ್ತಿನ ಮಾಲೆಯ ಅರ್ಪಿಸಿವೆ

ಬೇಕಿಲ್ಲ ಬಳುವಳಿ 
ನನಗೆ, ನೀ 
ಬಳಿ ಇದ್ದರೆ ಸಾಕು 
ನಲಿವೆ
************
ಕನಸುಗಳನು 
ಕದ್ದಾದರೂ 
ತರುವೆ 
ನಿನ್ನಿರುವಿಕೆ 
ಇದ್ದರೆ 
ಅವುಗಳಲ್ಲಿ 
************
ಜಾರುತಿವೆ 
ಸಂಜೆಗಳು 
ಒಂದರ 
ಮೇಲೊಂದರಂತೆ 
ನಿರಂತರ
ನೆನಪುಗಳನ್ನು 
ಮಾತ್ರ 
ಜಾರದಂತೆ 
ಹಿಡಿದಿಟ್ಟು
*************
"ನಾ ನೆಟ್ಟ 
ಸೂಜಿ ಮಲ್ಲಿಗೆ
ಬಳ್ಳಿ ಬೆಳೆದು 
ಇಂದು, ನಾ
ಇಲ್ಲ ಅಲ್ಲೀಗ
ಹೂ ಕೀಳಲು

-ನಗೆಮಲ್ಲಿಗೆ