Tuesday 17 December 2013

ಹನಿ-ಹನಿ

ಅರಿವಿರದ 
ಸಣ್ಣ ಹೃದಯ
ಸೋತಿಹುದು 
ತನಗೆ ತಾನೇ 
ಮಾಡಿಕೊಂಡು
ವಿರಹವೆಂಬ
ದೊಡ್ಡ ಗಾಯ 

******
ಒಮ್ಮೆ
ಮನಸ್ಸನ್ನು
ಮರೆಮಾಚಿಸಿ
ನಟಿಸಬೇಕು
ಮರೆತಂತೆ 
ನಿನ್ನ 
*****

ತುಸು ದೂರ
ಜತೆ
ನಡೆಯಬೇಕು
ನಾವೊಟ್ಟಿಗೆ
ಮರು ಮಾತು 
ಗುನುಗಿ
ಸದ್ದಿಸದೆ

ಬಂದು ಬಿಡು ಒಮ್ಮೆ 
ಕತ್ತಲಾಗುವುದು 
ಕೋಣೆ 
ಮುಗಿಯುತಿದೆ 
ಹಚ್ಚಿದ 
ಹಣತೆಯ ಎಣ್ಣೆ 
*********

ಹಠಕ್ಕೆ ಬಿದ್ದ ಅಲೆ 
ಅದೆಷ್ಟು ಬಾರಿ 
ಬಳಿಬಂದು 
ಬಡಿದರೂ 
ತೀರ ತಬ್ಬಿ 
ಕೊಳ್ಳಲಾಗದು. 
ಅಬ್ಬರದ ಅಲೆಯೂ 
ಸುಮ್ಮನಾಗದು
**********


ಕಂಡ ಕನಸುಗಳೆಲ್ಲ 
ಕಲ್ಲಿನಂತೆ ಆದವೆಂದು 
ಚಿಂತೆ ಬೇಡ 
ಕಲ್ಲಿಗೆ ಮಾತ್ರ ಇಹುದು 
ಶಿಲೆಯ ಕಲೆಯಾಗಿಸುವ 
ಅರ್ಹತೆ
ಕಾಯಲೇ ಬೇಕು ಕಲೆಗೆ
ಬೆಲೆತರುವ ಶಿಲ್ಪಿ
ಸಿಗುವವರೆಗೂ 

************

ನನ್ನೆದೆ ಸಾಲುಗಳೇ
ಅದಾರೋ ಬರೆದಂತಿದೆ
ಕೂಗಿ ಕರೆದಂತಿದೆ
 
ಕರಗುತಿದೆ ಕಲ್ಲೆದೆ
ಬೆಲ್ಲದ ಹಾಗೆ
ತೊಯ್ಯುತಿದೆ ನಿನ್ನೆಡೆ  
ಸುಮ್ಮನೆ ಹಾಗೆ
 
********

-ನಗೆಮಲ್ಲಿಗೆ 

No comments:

Post a Comment