Tuesday, 23 July 2013

ನಿಲ್ದಾಣ ಇಲ್ಲದ ಪಯಣ :-)

ಕಾರಣಗಳೇ ಉಳಿದಿಲ್ಲ ಗೆಳೆಯ
ನನಲ್ಲಿ ಹಿಡಿದಿಡಲು ನಿನ್ನನು
ಮುತ್ತುಗವೆಂದೂ ಮಲ್ಲಿಗೆಯಾಗಿ
ಮುಡಿ ಏರಲಾರದು,
ಕಾಳ್ಗಿಚ್ಚು  ಆಗಲಾರದು
ಕಾನನದ ದಾರಿದೀಪ,
ಕಡಲಿಗೂ ಉಂಟು ಎರಡು ತೀರ
ಅವು ಎಂದೂ ಸೇರಲಾರವು ಹತ್ತಿರ 

*****************

ಮೌನಕ್ಕ 
ಶರಣಾದೆ
ನಿಜ!
ಅದರೂ 
ತೀರದ ಹಂಬಲ
ಮನಸಲ್ಲಿ  
ನಿನ್ನೊಡನೆ 
ಮತ್ತೆ ಮತ್ತೆ 
ಮಾತನಾಡಲು!!

********************
ಹೊತ್ತಾದರೇನು 
ನಿನ್ನ ಮುತ್ತಿಗೆ 
ಬಡಿವ ಹೃದಯಕದು 
ಸಿಕ್ಕೋ ಪ್ರೀತಿಯ 
ಕೈ ತುತ್ತು  ಅಲ್ಲವೇ !!

-ನಗೆ ಮಲ್ಲಿಗೆ