Friday, 2 August 2013

ಹನಿ-ಹನಿ


*******

ದಿನ ದಿನವೂ ಹೊಸ ಉಡುಗೆ 

ನೋವುಗಳ 
ಬೆತ್ತಲೆ ಬಿಡದೆ 
ಬಗೆ ಬಗೆಯ 
ನಗೆಯ
ಉಡುಪುಗಳನ್ನು
ಧರಿಸ ತೊಡಗಿಹೆ 

********
ಹುಟ್ಟುತ್ತವೆ
ಕನಸುಗಳು,
ಕಾರಣವೇ ಇಲ್ಲದೆ.
ಜಾರುತ್ತವೆ
ಕಂಬನಿಗಳು ,
ಕಾರಣಗಳೊಂದಿಗೆ.

**********

ನಿನ್ನೆಲ್ಲಾ ಆಸೆ 
ಕನಸುಗಳ 
ತೋಟಕೆ 
ಹಾರೈಕೆಯ 
ನೀರೆರೆಯುವೆ 
ನಾ ಸದಾ 
 
********
ಮೌನವೇ
ಅತೀ ದೊಡ್ಡ 
ಮಹಾಕಾವ್ಯ....
ಮೊಗೆದರೂ 
ಮುಗಿಯದ 
ಅಕ್ಷಯ 

-ನಗೆಮಲ್ಲಿಗೆ