Tuesday 23 July 2013

ಮಹಾಪರ್ವ ಅರ್ಪಣೆ



ಸರವೆಗದಿ ಚಲಿಸುತಿದ್ದ
ಮಾಯಮೃಗದ ಬೆನ್ನತಿ
ಕಂಬನಿಗಳ ಕಡೆಗೆ
ಮರಳಿ ಬಂದ ಮನ್ವಂತರ
ದೂರದಿಂದಲೇ ಜೀವ ಹಿಂಡಿ
ಹಾಡಾಗಿ ಹೊರಹೊಮ್ಮೆ
ಎದೆಯ ನೋವುಗಳ
ಮುಕ್ತ ಹಸ್ತ
ಮಣ್ಣ ತಿಂದು ಸಿಹಿ
ಹಣ್ಣ ಕೊಡುವ ಮರ
ಬೇವ ಅಗಿವ
ಸವಿಗಾನದ ಹಕ್ಕಿ ಹಾಡಿ
ಮರೆಯಲಿ ನಿಂತೇ
ಮುಕ್ತ ಮುಕ್ತ
ಹೊಸನಾಟಕದ
ಬೆಂಕಿ ಬೆಳಕಿನ ವೇಷ
ಮಹಾಪರ್ವ

-ನಗೆ ಮಲ್ಲಿಗೆ

No comments:

Post a Comment