Saturday 25 May 2013

ಅಮ್ಮ ಲಾಲಿ ಜೋ


************

ಅಮ್ಮ ನೀನೆ ಬಂದು ನೋಡು
ಬರೆದ ನಾನು ನಿನ್ನ ಮೊಗವ
ನಾನಿನಗೆ ತೋರುವ ಮುನ್ನಾ
ಯಾಕೆ ಅಮ್ಮ ದೂರವಾದೆ ಇನ್ನಾ
ಪುಟ್ಟ ಕಂಗಳು ಸುತ್ತ ನೋಡಿ
ಕೆಳುತಿಹವು ನನ್ನಾ ...
ನೀ ಬಂದು ಲಾಲಿ ಹಾಡೆ ಅಮ್ಮ
ಲಾಲಿ ಲಾಲಿ ಜೋ ಲಾಲಿ ಹಾಡೆ ಅಮ್ಮ
ಲಾಲಿ ಲಾಲಿ ಜೋ ಲಾಲಿ ಹಾಡೆ ಅಮ್ಮ

ಕಣ್ಣೆ ಇರದ ಶಿವನೆ ನೋಡು
ಕರುಳ ಬಳ್ಳಿ ಕತ್ತರಿಸಿ ಕೊಟ್ಟ ಅವಳ
ಎದೆಯ ಹಾಲ ಕುಡಿವ ಮುನ್ನ
ಕೈ ಚಾಚಿ ಕಿತ್ತುಕೊಂಡೆ ಅವಳ
ಎಲ್ಲೆ ಇರದ ಅಮ್ಮನೋಲುಮೆ
ಕೂಡಿ ಕಳೆವ ಬಾಳ ಚಿಲುಮೆ
ಯಾಕೆ ಕಸಿದೆ ನೀನೆ ...???
ದೂರ ಮಾಡಿದ ಆ ಶಿವನೆ

ಪ್ರೀತಿ ಕೊಡುವ ಒಡಲ ಮೇಲೆ
ಪ್ರಳಯದಂತೆ ಎರಗಿ ಬಂದೆ
ಕೊಚ್ಚಿ ಅವಳ ಕರೆದು ಹೋದೆ
ನಾನು ಒಂಟಿ, ಇಂದು ನಾಳೆ
ಕಳೆದುಕೊಂಡ ಲಾಲಿ ಮಿಡಿತ
ನೋಡಿ ನಲಿವೆ ನೀ ನಗುತ
ಮೌನದಲ್ಲೇ ದಿನವು ಶಪಿಸುವೆ ನಾ ಸೋಲುತ -

- ನಗೆ ಮಲ್ಲಿಗೆ

2 comments:

  1. ಅಮ್ಮ ಮತ್ತ್ತು ಅಪ್ಪ ಇಬ್ಬರೂ ನಮ್ಮ ಬದುಕಿನಲ್ಲಿ ಅವರದೇ ಆದ ಮಾಹತ್ವದ ಪಾತ್ರ ನಿರ್ವಹಿಸುತ್ತಾರೆ. ಇಬ್ಬರಲ್ಲಿ ಒಬ್ಬರನ್ನು ಕಳೆದುಕೊಂಡರು ಅದು ತುಂಬಲಾಗದ ನಷ್ಟವೇ ಸರೀ. ಇದು ಮನ ಕುಳುಕುವ ಕವನ.

    ReplyDelete