Wednesday 22 May 2013

ಪ್ರಾಸ ಪ್ರಯಾಣ



*********

ಮಾಡ
ತೊಡಗಿದ್ದಾನೆ 
ಕನಸುಗಳ 
ರಿಪೇರಿ 
ಮುಂದುವರಿಯುವುದೇ 
ಒಲವ 
ಕಾಮಗಾರಿ 
*******
ಮೌನಕ್ಕೆ ಕೊಟ್ಟು 
ಕುಂತಿದ್ದಾನೆ
ನನನ್ನು ಕೊಲ್ಲುವ 
ಸುಪಾರಿ
ಮರುಮಾತಿಲ್ಲದೆ 
ನಾ ಕಟ್ಟಲೇ
ಬೇಕಾಗಿದೆ ಪ್ರೀತಿಯ 
ಗೋರಿ 

**********

ಹೊರಬಿದ್ದಿದೆ 
ಬಹು ನಿರೀಕ್ಷಿತ 
ಪರೀಕ್ಷೆಯ 
ಫಲಿತಾಂಶ 
ಕಂಡು,ಬಿಸಿಲ 
ಬರದಲ್ಲೂ 
ಇಂಗದೆ 
ಉಳಿದಿದೆ 
ಕಣ್ಣಂಚಿನ 
ತೇವಾಂಶ  

****************
ಏಕಾಂತದಲ್ಲೇ 
ನಡೆಸುತಿಹೆ 
ನಿನ್ನೊಡನೆ 
ಸಂಭಾಷಣೆ 
ಬಂದು ನೀ 
ನೀಡಬೇಕಾಗಿದೆ 
ಮೌನಕ್ಕೊಮ್ಮೆ 
ವಿವರಣೆ 

*******
ನೀನಿಲ್ಲದೆ 
ಏರು ಪೇರಾಗಿದೆ 
ಹೃದಯ ಬಡಿತ 
ಬಳಿಬಂದರೆ 
ನೀ ಹಿಡಿತಕ್ಕೆ 
ಸಿಗುವುದು 
ಖಂಡಿತ 
*****
ಮುನಿಸು
ಬೆಳೆದು 
ಮನಸಾಗಿದೆ 

ಹೋಳು 
ಸಂಗಾತಿ ಇರದೆ 
ಏಕಾಂಗಿ ಆಗಿದೆ 
ಬಾಳು 

********
ತೋಚಿದ್ದು 
ಗೀಚಿ 
ಹೊರಟ್ಟಿದ್ದೇನೆ 
ಅಭಿಪ್ರಾಯ 
ನಿಮಗೇ 
ಬಿಟ್ಟಿದ್ದೇನೆ 
-ನಗೆ ಮಲ್ಲಿಗೆ

3 comments:

  1. ಸೂಪರ್ ...
    ಸಾಥ್ ಕೊಡಬರುತ್ತಿರೋ ಪ್ರಾಸ
    ಫಲಿತಾಂಶದ ಬಗೆಗಿನ ತ್ರಾಸ .
    ಇಲ್ಲ ಅನ್ನುವಂತೆ ಭಾಸ !
    ಆಗುವುದೇ ಆಭಾಸ ?

    ಚೆನ್ನಾಗಿದೆ. ಈ ನೆನಪಿನ ದೋಣಿಯ ಭಾವಗಳು ಇಷ್ಟವಾದವು

    ReplyDelete
  2. ಹನಿಗಳು ಪದೇ ಪದೇ ಮೆಲುಕು ಹಾಕುವಂತಿದೆ.

    http://badari-poems.blogspot.in/

    ReplyDelete
  3. ಧನ್ಯವಾದಗಳು ಭಾಗ್ಯ ಅಂಡ್ ಬದರಿ ಸರ್

    ನಿಮ್ಮ ಸಲಹೆ ಪ್ರೋತ್ಸಾಹ ಸದಾ ಇರಲಿ

    ReplyDelete