*********
ತೊಡಗಿದ್ದಾನೆ
ಕನಸುಗಳ
ಕನಸುಗಳ
ರಿಪೇರಿ
ಮುಂದುವರಿಯುವುದೇ
ಒಲವ
ಮುಂದುವರಿಯುವುದೇ
ಒಲವ
ಕಾಮಗಾರಿ
*******
ಮೌನಕ್ಕೆ ಕೊಟ್ಟು
ಕುಂತಿದ್ದಾನೆ
ನನನ್ನು ಕೊಲ್ಲುವ
ಸುಪಾರಿ
ಮರುಮಾತಿಲ್ಲದೆ
ನಾ ಕಟ್ಟಲೇ
ಬೇಕಾಗಿದೆ ಪ್ರೀತಿಯ
ಗೋರಿ
**********
ಹೊರಬಿದ್ದಿದೆ
ಬಹು ನಿರೀಕ್ಷಿತ
ಪರೀಕ್ಷೆಯ
ಫಲಿತಾಂಶ
ಕಂಡು,ಬಿಸಿಲ
ಬರದಲ್ಲೂ
ಇಂಗದೆ
ಉಳಿದಿದೆ
ಕಣ್ಣಂಚಿನ
ತೇವಾಂಶ
****************
ಏಕಾಂತದಲ್ಲೇ
ನಡೆಸುತಿಹೆ
ನಿನ್ನೊಡನೆ
ಸಂಭಾಷಣೆ
ಬಂದು ನೀ
ನೀಡಬೇಕಾಗಿದೆ
ಮೌನಕ್ಕೊಮ್ಮೆ
ವಿವರಣೆ
*******
ನೀನಿಲ್ಲದೆ
ಏರು ಪೇರಾಗಿದೆ
ಹೃದಯ ಬಡಿತ
ಬಳಿಬಂದರೆ
ನೀ ಹಿಡಿತಕ್ಕೆ
ಸಿಗುವುದು
ಖಂಡಿತ
*****
ಮುನಿಸು
ಬೆಳೆದು
ಮನಸಾಗಿದೆ
ಹೋಳು
ಸಂಗಾತಿ ಇರದೆ
ಏಕಾಂಗಿ ಆಗಿದೆ
ಬಾಳು
********
ತೋಚಿದ್ದು
ಗೀಚಿ
ಹೊರಟ್ಟಿದ್ದೇನೆ
ಅಭಿಪ್ರಾಯ
ನಿಮಗೇ
ಬಿಟ್ಟಿದ್ದೇನೆ
-ನಗೆ ಮಲ್ಲಿಗೆ
ಸೂಪರ್ ...
ReplyDeleteಸಾಥ್ ಕೊಡಬರುತ್ತಿರೋ ಪ್ರಾಸ
ಫಲಿತಾಂಶದ ಬಗೆಗಿನ ತ್ರಾಸ .
ಇಲ್ಲ ಅನ್ನುವಂತೆ ಭಾಸ !
ಆಗುವುದೇ ಆಭಾಸ ?
ಚೆನ್ನಾಗಿದೆ. ಈ ನೆನಪಿನ ದೋಣಿಯ ಭಾವಗಳು ಇಷ್ಟವಾದವು
ಹನಿಗಳು ಪದೇ ಪದೇ ಮೆಲುಕು ಹಾಕುವಂತಿದೆ.
ReplyDeletehttp://badari-poems.blogspot.in/
ಧನ್ಯವಾದಗಳು ಭಾಗ್ಯ ಅಂಡ್ ಬದರಿ ಸರ್
ReplyDeleteನಿಮ್ಮ ಸಲಹೆ ಪ್ರೋತ್ಸಾಹ ಸದಾ ಇರಲಿ