Thursday, 9 May 2013

"ಎಲ್ಲರಿಗೂ ಕಾಲ ಬರುತ್ತದೆ, ಒಂದೊಂದು ದಿನ. ಬಾರದವಳೆಂದರೆ ನಾನೇ. "ಕಾರಣವಿಲ್ಲದೆ ಬಂದು ಕಾಡೋ
ಒಂದಷ್ಟು ಪ್ರಶ್ನೆಗಳು ಯಾಕೋ
ಯಾರನ್ನೋ  ಕಳಕೊಂಡ ಭಾವ ?

ಆ ಯಾರು? ಯಾಕಾಗಿ ಕಾಡುತಿದೆ?
ಸಂಬಂಧ, ಸ್ನೇಹ, ಪ್ರೀತಿ, ವಾತ್ಸಲ್ಯ
ವ್ಯಾಮೋಹ  ಹೆಸರಿಲ್ಲದ ಅನುಬಂಧವೇ ಅದು?
ಸಂತೆಯಲ್ಲಿ ಇಟ್ಟವರು ಯಾರು ಚಿಂತೆಯ ಅಂಗಡಿಯ?
ಕೂಗಿ ಮಾರುವರು ಯಾರು  ಕಂತೆ ಕಂತೆಯ?
ಹೇಗೆ ಹೊರಡಲಿ ಹೊತ್ತು ಗೊಂದಲಗಳ ಗಂಟು ಮೂಟೆಯ?

ಪ್ರಶ್ನೆಯ ಮಣಿ ಬಿಡಿಬಿಡಿಯಾಗಿ ಬೀಳುತಿವೆ
ಮನದೊಳಗೆ, ಉತ್ತರದ ಮಾಲೆಯ
ಪೂಣಿಸಬೇಕಾಗಿದೆ ಕಾಲವೇ ಕೊನೆಗೆ
 
- ನಗೆ ಮಲ್ಲಿಗೆ