Friday, 17 May 2013

ಕುಹೂ ಎನ್ನೆ ಒಮ್ಮೆ:-)ಮಾಮರವು ಚಿಗುರುಟ್ಟು
ಹಸಿರಾಗಿ ಹಸಿದು 
ಕಾಯುತಿಹುದು ನಿಂಗ

ಹ್ಯಾಂಗ ಮರೆಯಲಿ ಹೇಳು
ಅವನ ಪ್ರತಿಮಾತ ಮಧುರ
ನಿನ್ನಹಾಂಗ,ದೂರದ ಬಡಗಿ ಅವ
ತಿರುಗಿ ಬಾರದಂಗ
ಹೊಂಟಾನು ಮರೆತು ನನ್ನ

ವರ್ಷಕಳೆಯಿತು ಇನ್ನ
ಮರಳಿ ಬಾರೆಲೇ ಇಲ್ಲ ದೂರದವ
ಮೌನ ಮರೆತು ಮತ್ತೆ
ಹಾಡಲೇ ಕೋಗಿಲೆ ಕೇಳಿ
ಬಂದಾರು ಬಂದಾನು ನೋಡಲಿಕ್ಕೆ ನನ್ನ

ಮೌನ ಮರೆತು ಹಾಡೆಲೆ
ನಿನ್ಹಂಗ ನಾನು, ನಿನ್ಹಂಗ ನಾನು
ಪ್ರತಿ ಚಿಗುರಿಗು ಹೊಸರಾಗ
ಬೆರೆಸಿ ಹಾಡು, ಬಾರದೆ ಹೋದರೇನು
ಅವನು, ನಿನ್ನ ಸುಮಧುರ ಧನಿಯಲ್ಲೇ
ಬೇರೆತಿಹನು ಅವನು

ನಗೆ ಮಲ್ಲಿಗೆ