Tuesday 26 March 2013

ಬಂದೇ ಬರುತಾವ ಕಾಲ :-)


ಹೊತ್ತಾಯಿತು ನೀ ನೆಡೆ
ಕಾದು ಕುಳಿತರೇನು-
ಕಳೆದ ಕಾಲ ಹಿಂತಿರುಗದು

ಬಿಕ್ಕಳಿಸಿ ಅತ್ತು ಬಿಡೆ
ಮುಗುದ ಮನದ
ದುಗುಡ ಹಗುರಾದಿತು

ನೋಡೇ ಗೆಳತಿ ಅಲ್ಲಿ!! ವಸಂತಕೊಟ್ಟ
ಹಸಿರುಡುಗೆಯ ತೊಟ್ಟು
ನಾಚುತಿಹುದು ಬರಡಾಗಿದ್ದ ಆ ಮರ ..

ಜಾಣೆ ಕೇಳೆ ನಿನಗೂ
ಒಬ್ಬ ವಸಂತನತೆ ಹೊಸ ಉಡುಪ
ಕನಸನಿಡಿದು ಕಾಯುತಿಹನು!!!!

ಕೊಂಚ ತಡೆ..ದುಗುಡವ
ದೂರ ದೂಡೋ ಚೈತ್ರ ಮಾಸದ ಕಾಲ
ನಿನ್ನೆಡೆಗೆ ಬಂದೇ ಬರುತಾವ ನೋಡೆ.

No comments:

Post a Comment