Tuesday, 26 March 2013

ಚುಟುಕಗಳು

ಸ್ವಾಗತ-ಗೊಂದಲ...
*************
ವೇದಿಕೆಮೇಲೆ ನಿಂತು 
ಅತಿಥಿಗಳನ್ನು ಸ್ವಾಗತ
ಮಾಡಲು ಮುಂದಾದೆ...
ಸಂಭೋದನೆ ಮಾಡಲು 
ಗೊಂದಲ ಏಕೆಂದರೆ ..?
ಅಲ್ಲಿದ್ದ ಶ್ರೀಮತಿ ಕುಮಾರಿ 
ಕುಮಾರಿ ಶ್ರೀಮತಿ ಆಗಿದ್ದರು...!


ಜೆಡೆ
**********
ಮಾರುದ್ದ ಜೆಡೆ ಇದ್ದರೆ
ಅದು ಸಂಪ್ರದಾಯ
ಮೂಟುದ್ದ ಜೆಡೆ ಇದ್ದರೆ
ಅದು ಮೊಡ್ರೆನ್ಮಯ


ಟಿಪ್ಸ್...
*******
ಬೆಳ್ಳಗೆ ಕಾಣಲು
ಮಾಡಬೇಕಾದ
ಸರಳ ವಿದಾನ
ಆಫ್ರಿಕಾನ್ಸ್ ಪಕ್ಕದಲ್ಲಿ
ನಿಂತರೆ ಸಾಕು..!


ಸೋಮಾರಿ...
*********
ಪರೀಕ್ಷೆಯಲ್ಲಿ
ಬರೋ ಪ್ರಶ್ನೆಗಳಿಗೆ
ಉತ್ತರ ಹೊಳೆಯದಿದ್ದಾಗ
ಪ್ರಶ್ನೆಗಳೇ ನನ್ನ ಉತ್ತರ..!
.....................ತೊಗಲಕ್ -ಗಾಂಧಿ....

ಮುಂಗಾರು ಮಳೆಯಲ್ಲಿ
ನೆನದ ಆ ಹುಡುಗಿ ಸಖತ್..!
ಆದರೆ ಆಕಿ ಈಗ
ರಾಜಕಾರಣದಲ್ಲಿ
ಯಾಕೋ ಮೊಹಮ್ಮದ್
ಬಿನ್ ತೊಗಲುಕ್..!ಸರಕಾರ...

ಚುನಾವಣೆಯಲ್ಲಿ
ಬಹುಮತ ಗಳಿಸಿದರೆ
ಸ್ವತಂತ್ರ ಸರ್ಕಾರ..!

ಇಲ್ಲದಿದ್ದರೆ ನಮ್ಮದು
ಸಮ್ಮಿಶ್ರ ಸರಕಾರ..!

- ನಗೆ ಮಲ್ಲಿಗೆ