Tuesday 21 August 2012

ಅರೆಹೊಳೆ ಸಾಹಿತ್ಯ ಸೌರಭ


ಮಂಗಳೂರಿನಲ್ಲಿ ನಡೆದ ಅರೆಹೊಳೆ ಪ್ರತಿಷ್ಥಾನ, 3k ಸಮುದಾಯ (ಕನ್ನಡ, ಕವಿತೆ, ಕವನ ) ಇವರ ಸಂಯುಕ್ತ ಆಶರದಲ್ಲಿ ನಡೆದ
ಅರೆಹೊಳೆ ಸಾಹಿತ್ಯ ಸೌರಭ, ಅಂತರ್ಜಾಲ ಬರಹಗಾರರ ಸಮಾವೇಶ ಪಾಲ್ಗೊಂಡಿದ್ದು ನನ್ನ ಭಾಗ್ಯವೇ ಸರಿ. ಸಾಂಸ್ಕೃತಿಕ ರಸಧಾರೆಯಲ್ಲಿ ಮಿಂದ ಆ ನೆನಪು ನನ್ನ ನೆನಪಿನ ದೂಣಿಯಾನದಲ್ಲಿ, ಇಂದು ಅಚ್ಚಳಿಯದ ಅಚ್ಹೆಗಳಗಿ ಅಂತರಂಗ ಸೇರಿಹೋಗಿದೆ. ಈ ಸಾಹಿತಿಕ , ಸಾಂಸ್ಕೃತಿಕ ಸಮಾಲೋಚನ ಸಭೆಯಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿ ನನಗೆ. ಈ ಸಾಹಿತಿಕ ಹೊಳೆಯಲ್ಲಿ ಅರೆಘಳಿಗೆ ವೇದಿಕೆಯಲ್ಲಿ ಕುಳಿತಿದ್ದು ನನ್ನ ಪೂರ್ವಜನ್ಮದ ಸೌಭಾಗ್ಯ. ರೂಪಕ್ಕ, ಅರೆಹೊಳೆ ಸರ್, ಮಹೇಶ್ ಮೂರ್ತಿ ಸರ್  ಮತ್ತು ನಮ್ಮ 3k ಸಮುದಾಯದ ಎಲ್ಲ ಸದಸ್ಯರು ನಾವೆಲ್ಲಾ ಒಂದೇ ಎಂಬಂತೆ ಎಲ್ಲರನು ಸಮಾನವಾಗಿ ಉಪಚರಿಸಿದ ರೀತಿ ಹೋಗುವ ಮುನ್ನ ಎಲ್ಲೋ ಮನಸ್ಸ ಮೂಲೆಯಲ್ಲಿ ಇದು ಫೇಸ್ ಬುಕ್ ಸಮುದಾಯ ಯಾರೊಬ್ಬರ ಮುಖಪರಿಚಯವು ಇಲ್ಲ ಹೇಗೆ ಈ ಮೂರುದಿನ ಹೋಗೋದು ಎಂಬ ಆತಂಕ ಮನೆಮಾಡಿತ್ತಾದರು, ಒಮ್ಮೆ ನಮ್ಮೆಲ್ಲ 3k ಬಳಗದ ಗಳತಿ/ಗೆಳೆಯರನ್ನು ನೋಡಿ ಮಾತನಾಡಿದ ತಕ್ಷಣ ಎಲ್ಲೋ ಯಾವತ್ತೋ ಕಳೆದು ಹೋಗಿದ್ದ ಸಂಬಂದ ಮತ್ತೆ ಸಿಕ್ಕಿದ ಸಂತೋಷ, ದೂರದ ದುಗುಡ ಹಗುರಾದ ಮನಸ್ಸು ಆತಂಕವನ್ನು ದೂರ ಅಟ್ಟಿತು. 
ವಾಮನ ನಂದ ದಪತಿಗಳ ಭೇಟಿ, ಪುಟ್ಟು ಪುಟ್ಟ ಕುಸುಮಗಳ ಬನ ಸಂವೇದನದಲ್ಲಿ ಕಳೆದ ಕ್ಷಣ, ಅರೆಹೊಳೆ ಸಾಹಿತ್ಯ ಸೌರಭ, 3k ಸಮುದಾಯ (ಕನ್ನಡ, ಕವಿತೆ, ಕವನ )ಅಂತರ್ಜಾಲ ಬರಹಗಾರರ ಸಮಾವೇಶ, ಕುಂಚ ಸೌರಭದ ಚಿತ್ರಗಳ.......ಸಂವೇದನದ ಪಾತ್ರಗಳು, ಲಯನ್ಸ್ ಕ್ಲಬ್ ಸಂಗಡಿಗರು ಹಾಡಿದ ಜೈಭಾರತ ಜನನಿಯ ತನುಜಾತೆ,  ನೃತ್ಯ , ಸಂಗೀತ , ಯಕ್ಷಗಾನದ ಗೀತೆಗಳು  ಒಟ್ಟಾರೆ ಹೇಳೋದಾದರೆ ಅದು ಒಂದೇ ವೇದಿಕೆಯಡಿ ಬಣಬಡಿಸಿದ "ಸಾಂಸ್ಕೃತಿಕ-ಸಾಹಿತಿಕ ರಸದೌತಣ ಕೂಟ ".












ತಂಗಳೂರ ಕನಸ 
ಬಾಚಿ ಅಪ್ಪಿ ಸಂತೈಸಿತು 
ಅಲ್ಲಿ  ಮಂಗಳೂರು 

ಇಲ್ಲಿ ಈಗ ಆಗಿವೆ ಹಿಡಿದಿಟ್ಟ ಛಾಯಾ ಚಿತ್ರಗಳು, ಆ ದಿನಗಳ ನೆಮ್ಮೆಲ್ಲರ ಒಡನಾಟದ ಕುರುಹುಗಳು,ಆ ಸುಂದರ ಸಮಾವೇಶಕ್ಕೆ ಆಹ್ವಾನಿಸಿದ ಎಲ್ಲರಿಗು ನನ್ನ ಅನಂತ ಅನಂತ ಧನ್ಯವಾದಗಳು 


ಇಂತಿ 
ನೆನಪಿನ ದೋಣಿಯಲ್ಲಿ ನಾನು 
ಅನುಪಮ ಎಸ್ ಗೌಡ 

No comments:

Post a Comment