Monday 2 July 2012

Sunday Outing with close friends



ಭಾನುವಾರ  @ ಶಿವಗಂಗೆ :ತುಮಕೂರು ಜಿಲ್ಲೆ 
July 1st 2012


ನೆನಪಿನ ನಾಳೆಗಳಲ್ಲಿ ಇಂದು ಘತಕ್ಕೆ ಹೊರಟ ನೌಕೆಯ ಒಂದು ಸಣ್ಣ ತುಣುಕಿನ ಸುತ್ತ  ನಾನು ಅನು. ಪ್ರತಿವಾರದ ತರಹ ನಮಗೆಲ್ಲ ರಜೆ ಇರೋದಿನ. ತುಂಬಾ ದಿನಗಳ ನಂತರ ನಾವು ೮ ಜನ ಸ್ನೇಹಿತರು ಒಟ್ಟುಗೂಡಿ ಮಾಡಿದ ಏಕದಿನದ ಪ್ರವಾಸ. ಬೆಳ್ಳಿಗೆ ೬:೩೦ಗೆ Bangalore ಇಂದ ಹೊರಟ ಪ್ರಯಾಣ .....ಕಾಮತ ಹೋಟೆಲ್ಲಿ ನಲ್ಲಿ ಎಲ್ಲರು ಇಡ್ಲಿ ತಿಂದು ೮:೩೦ ಶಿವಗಂಗೆ ತಲುಪಿದೆವು. ದೇವರ ದರ್ಶನಮಾಡಿ. ಬೆಟ್ಟ ಹೊತ್ತೋಕೆ ಶುರು ಮಾಡಿದೆವು. ನಾನು. ಅಬಿದ (ತಿಹಮಿ) ಅರ್ಚನ (ಸೋನ ಬುಜ್ಜಿ ) ಆಶಾ, ವಿಲ್ಸೋನ್ , ರಾಘು, ಪ್ರಸಾದ್ ಅಂಡ್ ಹಿಮಾನ್ಸು, ಮುಂದೆ  ಏನ್ ಹೇಳೋದು ಅಲ್ಲಿನ ನಮ್ಮ ತರ್ಲೆ. ಗಲಾಟೆ, ಅಬ್ಬರ, ಡಾನ್ಸ್ , ಮಾತುಕತೆ, ಮಧ್ಯೆ ಮಧ್ಯೆ ಕಾಲು ನೋವು, ಅದರ ಜೊತೆಯಲ್ಲೂ ಫೋಟೋ ತೆಗ್ಸ್ಕೊಲೋ ಸಡಗರ. ಸ್ನೇಹಿತರೆ ಈ ಇಷ್ಟು ವರ್ಷದಲ್ಲಿ, ನೆನ್ನಯ ಆ ಮನಸ್ಸಿಗೆ  ಮುದ ನೀಡುವಂತಹ ವಾತಾವರಣ ಅನಿರೀಕ್ಷಿತ ಬಲು ಸುಂದರ (ಸೂಪರ್ ಸೂಪರ್)



 ಬೆಟ್ಟದ ತುದಿಗೆ ಹೋದ ತಕ್ಷ್ಣನ ಹ ಹ ಎಲಿದ್ದನೋ ಆ ಮಳೆರಾಯ ನಮ್ಮೆಲರಿಗೆ ಆ ಸುಂದರ ಪ್ರಕೃತಿಯ ರಸದೌತಣವ ಉಣ ಬಡಿಸಲು ಬಂದೇ ಬಿಟ್ಟ ಕೆಲಕಾಲ. ಆ ಮನಮೋಹಕ ರಮಣೀಯ ಬೆಟ್ಟದ ತಪ್ಪಲ ಮಂಜು ಮುಸಿಕಿದ ವಾತಾವರಣ, ಕೈಗೆ ಸಿಕ್ಕೆಬಿಟ್ಟಿತೆನೋ ಅನ್ನೋ ಬೆಳ್ಳಿ ಮೋಡದ ಸಾಲುಗಳು ಇದೆಲ್ಲವನ್ನು ನೋಡುತ್ತ, ಆ  ಸೌಂದರ್ಯ ಸೀಮೆಯ ಸೊಬಗನ್ನು ಕಂಡ ನಾವೇ ಧನ್ಯವಂತರು ಎನಸಿತು. ಪ್ರಕೃತಿಯ ಮುಂದೆ ಮಾನವ ಬರಿ ಸೊನ್ನೆ. ನಿಜ ಸ್ನೇಹಿತರೆ ಜುಯಿ ಜುಯಿ ಜುಯಿ ಅಂತಾ ಶಬ್ದ ಮಾಡೋ ಗಾಳಿ, ಮೋಡಕವಿದ ವಾತಾವರಣ,
                     


 ಮಳೆಹನಿ ಬಿದ್ದು ಬೆಟ್ಟದ ಮೇಲೆ ಬುಗ್ಗೆಯತೆ ಮೇಲೆ ಏಳುತಿದ್ದ ಆ ಹೋಗೆಯ
ಹೇಗೆ ಬಣ್ಣಿಸಲಿ ನಾ  ಆ ಸೊಬಗ ಸಿರಿಯ, ಅದಕಂಡ 
ನಮ್ಮೆಲ್ಲರ ಕಣ್ಣ ಪೊರೆಯಸರಿಸಿದ ಕಾಣದ ಕೈಯ ಪರಿಯ 
ಅದು ಆಕಾಶ ಗಂಗೆಯಲ್ಲಿ ಮಿಂದ ಸಿರಿ, ಮನ 
ಮನದಲ್ಲೂ ಸೆಟೆದು ನಿಂತ ತುಮಕೂರಿನ ಹಿರಿಮೆಯ ಗರಿ 
ಹೂವಿನ ಮಕರಂದವನ್ನು ಹಿರೋ ಭ್ರಮರದ ಹಾಗೆ 
ಶಿವಗಂಗೆಯ ಬೆಟ್ಟದ ತುದಿಯಲ್ಲಿ ನಿಂತ ನಾವೆಲ್ಲ 
ಪ್ರಕೃತಿ ಮಾತೆಯ ಮೋಹಕ ಮಾಯಾವಿ ಸಿರಿಯ
ಸೊಬಗ ಹಾಗೆ ಕಣ್ಣಲೇ ಸೆರೆ ಹಿಡಿಯುತ್ತ ದಿನಪೂರ್ತಿ ಕಳೆದೆವು.

ಮಧ್ಯಾನದ ಊಟ ಸಂಜ್ಜೆ ೫:೪೫ ಕ್ಕೆ ವಿಥ್ signature hahahhahaದಾರಿಯಲ್ಲಿ ಸಿಕ್ಕ ಡಬಾದಲ್ಲಿ ಮುಗಿಸಿ ದಾರಿ ಉದ್ದಕ್ಕೂ ಹಾಡು, ಅಂತ್ಯಾಕ್ಷರಿ, ರಸಪ್ರಶ್ನೆಗಳ ಸಾಲು , ಹರಟೆಯೊಡನೆ ರಾತ್ರಿ ೮ಕ್ಕೆ Bangalore ತಲುಪಿದೆವು. 

Thanks & Regards
Anupama.S Gowda 

       Alakere
http://anupamasuppy.blogspot.in/ 

No comments:

Post a Comment