Thursday 28 June 2012

ರೆಡ್ ಲೈಟ್ ಇದು ಸತ್ಯ ಸಂಗತಿ !!!!!


ಸ್ನೇಹಿತರೆ ಇದೊಂದು ಸತ್ಯವಾದ ಸಂಗತಿಯನ್ನು ಆಧರಿಸಿದ ಕವನ ಕಟ್ಟೋ ನನ್ನ ಪ್ರಯತ್ನ. ಸ್ಫೂರ್ತಿ ಸುಮಾರು ಎಂಟು ಹತ್ತು ತಿಂಗಳುಗಳ ಹಿಂದೆ ನಾನು ಸಮಯ ಟಿವಿಯಲ್ಲಿ ನೋಡಿದ ಒಂದು ಪ್ರೊಗ್ರಾಮ್.ಈ ಪ್ರೊಗ್ರಾಮ್ ನೋಡಿ ಅಂದು ನನ್ನ ಒಮ್ಮೆಲೇ ಬೇಸರವಾಯಿತು ಹಾಗೆ ಆ ತಾಯಿ Zana Briskiಗೆ ನಾವೆಲ್ಲರೂ ಹೇಳಬೇಕು ಕೋಟಿ ಕೋಟಿ ನಮಸ್ಕಾರ ಅನ್ನಿಸಿತು. ತು ಈ ಸಮಾಜ ಕೆಲೊಮ್ಮೆ ತುಂಬ ನೀಚ ಅನ್ಸುತ್ತೆ. ಇವತ್ತು ದುಡ್ಡುಕೊಟ್ಟು ಬೇಕ್ಕಿದ್ದನ ಕೊಂಡು ಕೊಳ್ಳತಾರೆ :(.
ಸುಖಕ್ಕೆ ಬರಿ ಗಂಡು ಹೆಣ್ಣು ಸಾಕು. ಆದರೆ ಸಂಸಾರಕ್ಕೆ ಗಂಡ ಹೆಂಡತಿ ಬೇಕು ಅಲ್ಲವೇ? ಅಲ್ಲೇ ತಾನೇ ಇರೋದು ನಮ್ಮ ಭಾರತೀಯತೆ?. ಮಾಸಿ ಮಸಣ ಸೇರೋ ಈ ಜೀವನ ಸಾಗಿಸೋಕೆ ಅವಶ್ಯಕತೆಗಳನ್ನ ಪೂರೈಸಬೇಕು ಆದರೆ ಅದು ಅಡ್ಡ ದಾರಿಯದ್ದಗಿರಬರದು.


ಮೂಲವಿಲ್ಲದೆ ಹುಟ್ಟೋ
ಮಕ್ಕಳ ತಾಣ, ನಡುವೆ
ಬಿಕರಿಯಾದ ಅವರ ಬದುಕು
ಅಲ್ಲಿ ಸುಖ ಮಾರಟಕ್ಕೆ
ಇಟ್ಟಿರುವ ವಸ್ತು


ಪ್ರತಿ ಮೊದಲ ಭಾರಿ
ಲಲನೆಯ ತೋಳತೆಕ್ಕೆ
ಬಿದ್ದವರಿಗೆ ಅಂದು ಹೊಸತನದ
ಸ್ವರ್ಗ ಸುಖದ  ಔತನ ಕೂಟ,
ಅವನಿಗೇನು ಗೊತ್ತು ಮತ್ತೆ ನಾಳೆ
ಅವನೇ ಹಳಬನೆಂದು

ಕಣ್ಣ ಮುಂದಿನ ಈ ಭಾಹ್ಯ ರಸಯದ
ನಡುವೆ ಸಾಗುತಿತ್ತು ಗುರುತಿರದ
ಆ ಏರಿಯದ ಪುಟ್ಟ ಕಂದಮ್ಮಗಳ
ಜೀವಯಾನ ....ಅವರಿಗಾಗ
ಸಿಕ್ಕಿತ್ತು  Zana Briski ಪರಿಚಯ
ಆ ಮಹಾ ತಾಯಿ ಇತ್ತ ಕ್ಯಾಮರ

ಮಕ್ಕಳ ಕೈಯಲ್ಲಿ ಹಿಡಿಸಿತ್ತು
ಸುತ್ತ ಮುತ್ತಲಿನ ಸುಂದರ
ಪ್ರಕೃತಿಯ ಚತ್ರ, ಆಗಾಗಲೇ
ಸಿಕ್ಕಿತ್ತು ಅವರ ಛಾಯಾ ಚಿತ್ರಗಳಿಗೆ
ಮನ್ನಣೆಯ ಯುನಿವರ್ಸಿಟಿ ಉತ್ತರ,


ಮುಳುಗುತ್ತಿದ್ದ ಆ ಬಿಕರಿ ಸುಖದ
ಮೂಖ ಸಾಕ್ಷಿಯ ಮನಗಳಲ್ಲಿ
ಉದಯಿಸಿದ ಹೊಸ ನೇಸರ
ಇಂದು ಅವರ ಬಾಳು ಸುಂದರ
ಆ ಮಕ್ಕಳೆಲ್ಲರ ಮನದಲ್ಲಿ ನಿರ್ಮಿಸಲಾಗಿದೆ
Zana Briskiಗೊಂದು ದೇವ ಮಂದಿರ .

-ಅನುಪಮ.ಎಸ್ ಗೌಡ



No comments:

Post a Comment