Wednesday, 20 June 2012

ಮರಳಿ ಬರುವೆಯಾ...?!?
ಕಾತುರದಿಂದ ಪುಳಕಗೊಂಡಿದ್ದೇನೆ
ನಿನ್ನ ಎದುರುಗುಳ್ಳುವ ಕ್ಷಣಗಣನೆಯಲ್ಲಿ
ಕೊನೆ ಬಾರಿಗೆ ಮಡಿವಂತಿಕೆಯ ಮನಸ್ಸಿನ
ಮಡಿಲಲ್ಲಿ ನಿನ್ನ ಮುದ್ದಾಡೋ ಹಂಬಲದಲ್ಲಿ

ಮೂಡಣದಿ ಸಾಗುತ್ತಿದೆ....
ಎನ್ನ ಕನಸುಗಳ ಜೀವಂತ ಶವದ ಮೆರವಣಿಗೆ
ಪಡುವಣಕ್ಕೆ ನೀ- ಬೆನ್ನು ಮಾಡಿ ಹೊರಟೆಯ
ಹೇಳು ನೀ ಮತ್ತೆ ಮರಳಿ ಬರುವೆಯಾ...?!?  

ಕೊನೆ ಭೇಟಿ-ಮೌನಕ್ಕೆ ಶರಣಾದ ಮಾತು
ಮೌನದಲ್ಲೂ ಚೀತ್ಕಾರವಿದೆ
ಮನವೇ.... ದೂರ ಸರಿಯದಿರು ದೊರೆಮಗನೆ
ನೀಯಾರೆನಗೆ ?? ಸರಿಯುವ ಮುನ್ನ ಉತ್ತರಿಸು
ನೀ ಮತ್ತೆ ಮರಳಿ ಬರುವೆಯಾ...?!?

ಪ್ರಶ್ನೆಗಳ ಸರದಿ ಸಾಲು
ಹಚ್ಚಿಕೊಂಡಿದ್ಯಾಕೆ..???ಮೆಚ್ಚಿಕೊಂಡಿದ್ಯಾಕೆ...??
ಎಡವಿದೆಲ್ಲಿ...???? ಜಾರಿದೆಲ್ಲಿ...???
ಬಿಸಿಲು-ಮಳೆ, ಗುಡುಗು-ಸಿಡಿಲು..ಸಹಿಸಲಾರೆ
ಕಸಿವಿಸಿಗೊಂಡಿದ್ದೇನೆ-ಇನಿಯ 
ನೀ ಮರಳಿ ಮುಖಾಮುಖಿಯಾಗುವೆಯಾ...????
ಮನಸ್ಸು ಮತ್ತೆ ಮತ್ತೆ ಕೆಳುತ್ತಿದೆ ಇನಿಯಾ
ಬರುವುದಾದರೆ ಹೇಳೊ ನಾ ಮನಸ್ಸು ಬದಲಿಸಿ
ನಾ ತೊಟ್ಟ ಬಳೆಗಳು ಚೂರಾಗುವ ಮುನ್ನ 
ಬೇಗ ಹೇಳು ಚಿನ್ನ ನೀ.............
ಮತ್ತೆ ಮರಳಿ ಬರುವೆಯಾ...?!? ಕಾಯುತ್ತಿರುತ್ತೇನೆ

Anupama S Gowda
Alakere