Monday 11 June 2012

ಮಾಸವಾಯಿತು-ಮಾಸಿ


*******

ಕನಸ ಉಡುಗೊರೆಯದು


ಮನಸ್ಸಿಗೆ ಹಿಡಿಸಿತ್ತು...


ಕಡಲಾಚೆ ಈಚೆಗೆ ತಂದೆ


ಮಾಸ ಕಳೆದ ಉಡುಗೆರೆ


ಮೂಲೆಯಲ್ಲಿ ಮಾಸಿ ಬಿದ್ದಿದೆ


ದೂಳುಕಂಡಾಗಲೆಲ್ಲಾ


ಕಸಿವಿಸಿಗೊಳ್ಳುತ್ತೇನೆ"


ಚಡಪಡಿಸುತ್ತೇನೆ


ಕೊರಗಿ ಬಳಲುತ್ತೇನೆ


ಅಶರೀರವಾಣಿ ತಡಕಾಡುತ್ತಿದೆ


ಒಂಟಿಯಾಗಿ ದೂಡಿ


ನೀ-ಎತ್ತ ಸರಿದೆ..?


ಮಾಯದ ಮುಸುಕಲ್ಲಿ


ಕಾಣದ ಕೈ ಮೋಡಿಯಂತೆ.
.
ಬೆಬ್ಬರ ಬೆರಗಾಗಿದೆ ಮನಸ್ಸು-


ನನ್ನೊಲವಿನ ಉಡುಗೊರೆ...


ನಿನ್ಬ ಬರುವಿಕೆಯ ದಾರಿಯಲ್ಲಿ


ನನ್ನ ನೋಟ ನೆಟ್ಟಿದೆ...!!!

ಅನುಪಮ.ಎಸ್

No comments:

Post a Comment