Friday 8 June 2012

ಕನಸ ಕೂಸು



ನಿಬ್ಬೆರಗ ಮುಬ್ಬು ತಬ್ಬಿ 
ಕಾಣಿಯಾಗಿದೆಎನ್ನ
ಕನಸ ಕೂಸು....ಅಸಂಖ್ಯ 
ಪ್ರಾಣಿ ಪಕ್ಷಿ ಜನರ 
ಗೊಂಡಾರಣ್ಯದ ಮಧ್ಯೆ 
ದಾರಿ ತಪ್ಪಿ, ಪುಲಿ ಧರಿಯ  
ನಟ್ಟನಡುವೆ ಸಿಕ್ಕಿಹಾಕಿಕೊಂಡಿದೆ
ನನ್ನ  ಹೊಂಗನಸ ಹಸುಗೂಸು, ಇನಿಯ
ಮತ್ತೆ ನೀ  ಮರಳಿ ಬಾರದಿರೆನ್ನ ಕನಸೊಳಗೆ
ದಾರಿತಪ್ಪಿದ ಆ ಹಸುಳೆಗೆ ದಾರಿ ತೋರದಿರು ಗೆಳೆಯ
ಬಿಟ್ಟು ಬಿಡು ನೀ ನನ್ನ ಕನಸೊಳಗೆ ಬರುವುದ 
ಕಾಣಿಯಾದ  ಆ ಹೊನಲ ಕೂಸ ಮತ್ತೆ ಬಳಿ ತಾರದಿರು
ಹಾರಿ ಹೋಗಲಿ ಅದರ ಪ್ರಾಣ ಪಕ್ಷಿ, 
ಹಾರಿ ಹೋಗಲಿ ಅದರ ಪ್ರಾಣ ಪಕ್ಷಿ
ಮತ್ತೆ ತಾರದಿರದರ ಶವವ 
ಈ ಮಡಿದ ಮನದ ಅಕ್ಷಿಯೊಳಗೆ

No comments:

Post a Comment