Monday 4 June 2012

ಮಮತೆಯ ಮಹಲ್



*************
ಮುಷ್ಟಿಯಗಲದ ಹೃದಯದಲ್ಲಿ
ದೃಷ್ಟಿಗೂ ನಿಲುಕದಂತೆ
ಅವಳು  ನಿರ್ಮಿಸಿದ
ಪ್ರೀತಿ-ಗೋಪುರದ,ಪ್ರೇಮ ಮಹಲಿಗೆ
ಭಾವಗಳ ಕೋಲ್ಮಿಂಚು
ಕರೆಯೋಲೆಗಳ ಛಾವಡಿ..
ಕಳಸವಿಟ್ಟಂತೆ...ಅವಳ
ಆ ಮೂಖ ಮೌನ-ನಿವೇದನೆ,
ಎದುರು ಅಂದ ಗೌಣ
ಅವಳ ಮೌನದ ಮಹಲು
ಅದ್ಯಾಕೋ ಕಾಣೆ"
ವೇದನೆಯ ಯಮುನೆಯಲ್ಲಿ ಮುಳುಗಿದ ಭಾವ
ಇಂದು ನವೀಕರಣಗೊಳಿಸದ ಆ ಮಹಲ
ಷಹಜಹಾನ್ ನಾನಲ್ಲ..! ನಾನಲ್ಲ !!!!!


ಅನುಪಮ ಎಸ್ ಗೌಡ
      ಆಲಕೆರೆ

No comments:

Post a Comment