Friday, 1 June 2012

ಕಡಲ ಯಾನ
ಯಾರು ಇರದ ಬದುಕಲ್ಲಿ ಎಲ್ಲ 
ನನ್ನವರನ್ನು ಎರವಲಾಗಿ ಪಡಿಯೋ 
ಪ್ರಯತ್ನ , ಆತಂಕದ ಒಡಲಲ್ಲಿ 
ಭೋರ್ಗರೆಯುವ ಬರಿದಾದ 
ಸೂಕ್ಷ್ಮ ಮನಸ್ಥಿತಿ, ಜಲಪಾತದಂತೆ  
ಹೊರಹುಮ್ಮುವ ಮನಸ್ತಾಪ 
ಭರವಸೆಗಳೇ ಇರದ ಬಾಳಲ್ಲಿ 
ಧೈತ್ಯ ಸುನಾಮಿಯಂತೆ ಅಪ್ಪಳಿಸೋ
ಅವಶ್ಯಕತೆಗಳ ಅಲೆಗಳು,ಕೊಚ್ಚಿಹೋದ  
ಕನಸುಗಳ ಎದುರು ಕುಳಿತು ಬಿಕ್ಕಳಿಸು 
ಕಣ್ಣುಗಳಲ್ಲಿ......ನೀರವ ಮೌನ 
ಸುಳಿಗೆ ಸಿಲುಕೋ ಬದುಕಲ್ಲಿ ಬಂದು 
ಪಕ್ಕಸರಿಸು  ಹೋದವರೇ ಎಲ್ಲ 
ಬಳಿಯೇ ಉಳಿದು ಕೈಹಿಡಿದು ಎಳೆದವರು
ಯಾರು ಇಲ್ಲ......ಯಾರ ಇಲ್ಲಿ ನಮ್ಮವರು?
ಈ ಕಡಲ ಯಾನದಲ್ಲಿ ಕೆಲವು ದಿನಗಳ 
ಪಯಣಿಗರೇ ಎಲ್ಲ, ಕೊನೆಯೊರೆಗೂ 
ಜೊತೆ ಉಳಿದವರು ಯಾರು ಇಲ್ಲ.


ಅನುಪಮ ಎಸ್ ಗೌಡ 
      ಆಲಕೆರೆ