Tuesday, 10 April 2012

ಹೋಗಿಬಾ ಗೆಳಯ

ಹೋಗಿಬಾ ಗೆಳಯ
ನಿನ್ನನು ಬಿಳ್ಕ್ಕೊಡುವ ಸಮಯ

ಉರುಳಿಹೋದ ದಿನಗಳ
ಗೆಳೆತನದ ತುಂಟಾಟದ
ನೆನಪುಗಳನ್ನು ನಾನೊಬ್ಬಳೆ
ಕುಂತು ಮೆಲುಕು ಹಾಕುವ ಸಮಯ
ಪಕ್ಕದ ಕಿಟಕಿಯ ಮೇಲೆ ಬೆರಳಾಡಿಸುತ್ತ
ನೀ ಮತ್ತೆ ಸಿಗುತ್ತಿಯೋ ಇಲ್ಲವೋ ಎಂಬ
ಆತಂಕದಲ್ಲಿ ಬರೆಯುವ ಸಮಯ

ಗುಂಡಗಿರುವ ತಿರುಗುವ ಈ

ಭುಮಿಯಲ್ಲಿದರು ಮತ್ತೆ ನಿನ್ನನು
ನೋಡುತ್ತೇನೋ  ಇಲ್ಲವಯೋ
ಎಂಬ ಭಯದಲ್ಲಿ ನಾವು ಕೂತ
ಜಾಗಗಳ ಎದುರು ಸುಳಿದಾಡುತ್ತ
ಒದ್ದೆ ಕಣ್ಣಿನಲ್ಲಿ ಕಾಲ ಕಳೆಯುವ ಸಮಯ

ನನ್ನ ನಲ್ಮೆಯ ಗೆಳೆಯ
ಮುಂದೆ ಒಂದುದಿನ ನನಗೆ  ನೀ
ಎದುರಾದರೆ ನೀ ಯಾರೆಂದು
ಕೇಳದಿರು ಈ ಪುಟ್ಟ ಗೆಳತಿಯ
ನೀ ಹೇಗಿದ್ದೀಯ ಎಂದು ಕೇಳು ಗೆಳೆಯ.

                       Anupama S Gowda
                               Alakere.