Saturday 28 April 2012

ಅಲೆ ಬಂದು ಕರೆವುದು
ಅವನೊಲುಮೆಯರಮನೆಗೆ
ಕನಸಾಗಿ ನಡೆಯುವುದು
ಅವನ ಸ್ವಪ್ನದೂರಿನಿಡೆಗೆ

ಕಾಡುವ ರಾಗ ಅವ ನುಡಿವಾಗ
ಅಂತರಂಗದ ತರಂಗ ಕುಣಿದಾಡಿದೆ
ಭಾವ ಹಾಡಾಡಿದೆ,  ಜೀವ
ನಿಂತಲ್ಲೇ ನೀರಾಗಿ ಹರಿದಾಡಿದೆ

ಸುಳಿಯಿರದ ಅಲೆಯ ಅಗಲಿರಲಾರೆ
ಹರೆಯದ ಕರೆಯ ತಡೆದುಹಿಡಲಾರೆ
ಹೊರಟಿದೆ ಯಾನ ಅವನೂರಿನೆಡೆಗೆ

Anupama S Gowda
      Alakere

No comments:

Post a Comment