Monday, 5 March 2012

ನೀಡದಿರು ಶಿಕ್ಷೆ
ಕೂಡಬೇಡ ನನಗೆ ಬಯಕೆಗಳ ನಿಕ್ಷೆ
ಬೇಡುವೆನು ನಿಮ್ಮದಿಯ ಬಿಕ್ಷೆ
ಅರಿವಿರದ ತುಮುಲ ಇರಿಯವುತಿದೆ ಒಡಲ
ಅರಿವಿನ ಕಮಲ ಹಬ್ಬಿದೆ ಮನದ ಕಡಲ
ತೊಳೆಯಲಾಗುತ್ತಿಲ್ಲ ಕೆಸರಿನ ಕೊಳೆಯ
ಸೋತಿದೆ ಸಮಯ
ಸಾಗರದ ಬಯಕೆಗಳ ಮುಂದೆ
ಬೇಯುತಿದೆ ಸಾಸುವೆಯ ಹೃದಯ
 
.......................ಅನು