Friday 17 February 2012



ಮುದ್ದು ಮುದ್ದು  ಹುಡುಗ 

ನಿನ್ನ ಕಣ್ಣಲಿ ಇದೆ ಕಾಗುಣಿತ ಅದ ಕಲಿಯೋಕೆ ನನಗೆ ಉತ್ಸಾಹ 
ನಿನ್ನ ಮಾತಲ್ಲಿದೆ ಸಂಗೀತ ಮಾತು ಕೇಳೋದೇ ನನ್ನ ಹವ್ಯಾಸ 
ಕೈಲ್ಲಿರೋ ಹಚ್ಚೆಯಲಿ ಬೆಚ್ಚಗೆ ನಿನ್ನ ಇರಿಸಿರುವೇನು 
ಮನಸಿನ ಅಂಚೆಯಲಿ ಪತ್ರವ  ಹಾಕಿರುವೇನು 
ಕಣ್ಣ ಭಾಷೆಯಲಿ ನಿನ ಪ್ರೀತಿಗೆ ಉತ್ತರಿಸುವೇನು 
ಬಾರೋ ನೀ ಬೇಗ ಪತ್ರ ಓದೋಕೆ ...
ಒಮ್ಮೆ ಬಾ ಬೇಗ ಉತ್ತರ ಕೇಳೋಕೆ
ಮನ ಮನಸಲಿ ನಿನ್ನದೇ ತಕದಿಮಿತ 
ಬಣ್ಣದ ಎಲೆಮೇಲೆ ನಿನ್ನದೆ ಸಾಹಿತ್ಯ 
ಮಾತಿನ ಪ್ರೀತಿ ಮಗ ...ಮುತ್ತಿನ ದತ್ತು ಮಗ 
ಯಾರೋ ನೀ ಯಾರೋ ಮುದ್ದು ಮುದ್ದು ಹುಡುಗ 
ಪುಟ್ಟ ಎದೆಯಲ್ಲಿ ಕಾವ್ಯ ಬರಿಯೋನು
ಮೂಲೆ  ಮೂಲೇಲು ಚಿತ್ರ ಬರಿಯೋನೋ 
ನೆನ್ನೆ ನಾಳೆಯ ಪ್ರತಿ ಕನಸಲ್ಲೂ ಮಿತ್ರನಾಗೊನು 

ಅನು {ಪುಟ್ಟ ಮಲ್ಲಿ}

No comments:

Post a Comment