Wednesday, 8 March 2017

ಅವಳ
ಕಣ್ಣೂಳಗಿನ ಕೂಗು
ಮನದಲ್ಲಿನ ನೋವು
ಕಡುರಾತ್ರಿಲಿ ಕಂಡ ಕನಸು
ಎಲೆಉದುರಿದ ಬೋಳು ಮರ
ಮತ್ತೆ ಚಿಗುರೋಡೆಯಲು
ಸೋತು ಸುಮ್ಮನಾಗಿಸುವ ಬರ
ನಿಂತ ನೀರಿನೂಳಗೆ ಒಂದೊಂದೇ
ಕಲ್ಲು ಎಸೆದು ರಾಡಿಯಾಗಿರುವ ಕರೆ
ಹಿಂತಿರುಗಿ ನೋಡಿದರೆ ಕೈಚಾಚಿ
ಕರೆವ ಅದಾವೂದೋ ಜೀವ !
ಯಾಕೋ ಕಾಣೆ ಎಲ್ಲವೂ ಒತ್ತಿ
ಹೇಳುತಿರುವಂತೆ ಭಾಸವಾಗುತ್ತದೆ
ಸುವರ್ಣಯುಗಕಂಡು ಮೆರೆದ
ಸಾಮ್ರಾಜ್ಯಗಳೆಲ್ಲ ನಶಿಸಿದ ಕಥೆಯ
ಈಹೂತ್ತಿನಲಿ....ಕಣ್ಣಂಚ ಸವರಿ
ಕೆನ್ನೆಮೇಲೆ ಗುಳಿಬಿಳುವಂತೆ
ನಕ್ಕು ಸುಮ್ಮನಿರಲು ಆದಿತೆ?

-ನಗೆಮಲ್ಲಿಗೆ

No comments:

Post a Comment