Thursday, 13 August 2015

ಬದುಕು

ಕುಂಟು ಹುಡುಗನೊಬ್ಬ ಕಡಿದಾದ
ಇಳಿಜಾರನ್ನು ಸರಾಗವಾಗಿ ಇಳಿಯುತ್ತಾನೆ

ಪಕ್ಕದಲ್ಲಿ ಇರುವೆಯೊಂದು  ​ಬೆನ್ನಮೇಲೆ
ಸಕ್ಕರೆ ಮೂಟೆಹೂತ್ತು  ನಿರಾಯಾಸವಾಗಿ ಸಾಗುತ್ತದ

ಕಾಗೆಯೂಂದು ಅರಿವಿಲ್ಲದೆ ಕೋಗಿಲೆ ಮೊ​ಟ್ಟೆಗೆ
ಕಾವುಕೂಟ್ಟು ಮರಿಮಾಡುತ್ತದ

ರಾತ್ರಿವೇಳೆ ಕಾಣುವ ಗೂಬೆ ಭಗ್ನಪ್ರೇಮಿಯೂಬ್ಬನಿಗೆ
ಸುಂದರವಾಗಿ ಕಾಣುತ್ತದೆ, ಕವನ ಕಟ್ಟುವಂತೆ ಹುರಿದುಂಬಿಸುತ್ತದೆ

ಕತ್ತಲಲ್ಲಿ ಮಿಂಚು ಹುಳುವನ್ನು ನೋಡಿ  ಕಾಮನಬಿಲ್ಲನು  ಕಂಡವಳಂತೆ ನಗುತ್ತಾಳೆ,
ಮುಂಜಾನೆ ದೇವರ ಪೂಜೆಗೆಂದು ಇಟ್ಟ ಹೂಗಳನು ತಾನೆ ಮುಡಿದು ಸಂಭ್ರಮಿಸುತ್ತಾಳೆ 

ನೆನಪುಗಳೆಲ್ಲವು ನೆಪವಾಗಿ ಹಠಮಾಡುವಾಗ ದೂರದಲೆಲ್ಲೊ
ವಿರಹಗೀತೆಯೂಂದು ಕೇಳುತ್ತದೆ 

ಸಿಗ್ನಲ್ ಬಳಿ ಕುಳಿತು ಚಪ್ಪಲಿ ಹೊಲೆಯುವವನ ಮರಗಟ್ಟಿದ 
ಕೈಗಳುಮೊಂಡು ಸೂಜಿಯನ್ನು ನೋಡುತ್ತದೆ

ನಾಟಕದ ಬದುಕಲ್ಲಿ ಎಲ್ಲರು ಬಂದು ನಟಿಸಿ ಹೋಗುತ್ತಾರೆ ನಾಟಕಕಾರ ಮಾತ್ರ
ಎಲ್ಲೋಕುಳಿತು ಎಲ್ಲರನ್ನು ನೋಡುತ್ತ ತನ್ನದೇಆದ ಲೆಕ್ಕಚಾರವನ್ನು ಹಾಕುತ್ತಿರುತಾನೆ.

-ನಗೆಮಲ್ಲಿಗೆ
 

No comments:

Post a Comment