ನೆನಪಿನ ದೋಣಿಯಲ್ಲಿ ನಾನು
Sunday, 2 September 2012
ಪ್ರತೀಕ್ಷೆ
*******
ನಿನ್ನ ಹುಟ್ಟುಗುಣ
ಉಪ್ಪಿನದಾದರೂ
ಸಿಹಿಯಾದೀತೆಂಬ
ಭರವಸೆಯಲ್ಲಿ
ಮುಪ್ಪಿನವರೆಗೂ ಕಾದೆ
ಕಾಯುತ್ತಾ ಕುಳಿತಲ್ಲೇ
ನಿನ್ನ ನೆನಪುಗಳನ್ನು ಹೆಕ್ಕಿ
ಮನಸ
ಮಾಳಿಗೆಯ
ಮೂಲೆ ಮೂಲೆಯಲ್ಲೂ
ಬಿಡಿಯಾಗಿ ಎಣಿಸಿ
ಜೋಡಿಸಿ
ದಾಖಲಿಸುತ್ತಾ
ಹೋದೆ
ಕೊನೆಗೂ ಲವಣ ಸಿಹಿಯಾಗಲಿಲ್ಲ
ಬದುಕು ಸವಿಯಾಗಲಿಲ್ಲ
.
- ಅನುಪಮ ಎಸ್ ಗೌಡ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment