Thursday 7 August 2014

ಅರಿಯದೆ ಆದ ಸ್ನೇಹ ಅರಿದು ಹೋಗುವ ಹಾಳೆ ಮಳೆ ಏನೆಂದು ಬರೆಯಲಿ :-) :-) :-) :-)

ಮೊನ್ನೆ ಸುಮಾರು ಮೂರು ಗಂಟೆ ಒಂದ್ ಮಿಸ್ ಕಾಲ್ ಬಂತು,
ನಾನ್ ಅಕ್ಕ ಮಾಡಿರ್ತಾರೆ ಅಂತ, ಇಲ್ಲ ಮಿಸ್ ಕಾಲ್ ಕೊಟ್ಟಿದು  ಹೃದಯಕ್ಕೆ,ಮನೆಗೆ,ಮನಸಿಗೆ ತುಂಬಾ ಹತ್ತಿರ ಇದ್ದು ಸದ್ಯದ ಮಟ್ಟಿಗೆ ಈಗ ದೂರ ಇರೋ ಸ್ನೇಹಿತೆ . Ture friends for ever ಅನ್ನೋಹಾಗೆ, ನಾನು ವಾಪಾಸ್ ಕಾಲ್ ಮಾಡಿದ ತಕ್ಷಣ ಅನು ಕನಸಲ್ಲಿ ಬಂದಿದ್ದೆ ಅಂದ್ಲು , ನನಗೆ ಒಮ್ಮೆಲೇ ಕೋಪ , ಸಂತೋಷ ಎರಡು ಒಟ್ಟೊಟ್ಟಿಗೆ ಲೇ ಕನಸಲ್ಲಿ ಬಂದ್ರೆ ಬರಿ ಮಿಸ್ ಕಾಲ್ ಕೊಡಿತಿಯ ಅಂದೆ. ನಾನಗೂ ಯಾಕೋ ಆಕಿ ನೆನಪಾಗ್ತಿದ್ದ್ಲು , ಊರಿಂದ ಅಮ್ಮ ಬಂದಿದ್ದರು ಅಲ್ವ ಬಗ್ಗೆ ತುಂಬಾ ಕೇಳ್ಕೊಂಡೆ ಮನೆಗೆ ಬಂದಿದ್ದಲ ಹೇಗಿದಾಳೆ ಏನ್ ಮಾಡ್ತಿದಾಳೆ ಅಂತ, ಅಮ್ಮ ಹು ನೀನೆ ತಾನೇ ಬಂದಿದ್ದ್ಲು ಅಂದಿದ್ದರು ಬೆಳಿಗ್ಗೆ.

ನಮ್ಮ ನಡುವೆ ಶುಭಾಶಯಗಳ ವಿನಿಮಯ ಇಲ್ಲ , ಇಪತ್ತು ಮೂರು ವರ್ಷಗಳ ಸ್ನೇಹ , ಅವಳ್  ಅಮ್ಮ ನಮ್ ಅಮ್ಮನು ಕ್ಲಾಸ್ಮೇಟ್ಸ್ , ನಾವು ಕೂಡ ಕ್ಲಾಸ್ಮೇಟ್ಸ್ ....... ಮುಂದೆ ನಮ್ಮ ಮಕ್ಕಳು ಕ್ಲಾಸ್ಮೇಟ್ಸ್ , ಸ್ನೇಹಿತರು ಆಗ್ಲಿ ಅನ್ನೋ ಆಸೆ. ತುಂಬಾ ಜಗಳ, ಮುನಿಸುಗಳ ನಂತರವೂ ಇಂದಿಗೂ ಗಟ್ಟಿಯಾಗಿದೆ  ನಮ್ಮ ಸ್ನೇಹ ...... ಮುಂದೇನು ಹೀಗೆ ಇರಲಿ ಅಂತ ಆ ದೇವರಲಿ ಪ್ರಾರ್ಥನೆ ಮಾಡಿತೀನಿ.

ಆ ನಾವಿಬ್ಬರು ಬಹುಪಾಲು ಒಂದೇ ಹೋಲಿಕೆ ಇದ್ದ್ವಿ .... ಅದಕ್ಕೆ ಹಿಂದೆ ಬರೆದ ಒಂದು ಹನಿಗವ ಮತ್ತೆ ಹೇಳ್ಬೇಕು ಅನ್ನೋ ಅಸೆ...................

ನಾವಿಬ್ಬರೂ ಆಗ
ಸುಂದರ
ಗೊಂಬೆಗಳ ಸಾಲು
ಆದರೀಗ
ಅವಳು ಡೋಲು
ನಾನು ಕೋಲು

-ನಗೆಮಲ್ಲಿಗೆ

ಗಳತಿ/ಗೆಳಯ ಎಲ್ಲರಿಗು ಸ್ನೇಹಿತರ ದಿನದ ಶುಭಾಶಯ ಗಳು

No comments:

Post a Comment