Thursday, 30 August 2012

ಕನ್ನಡ********

ದೂರದ ತೀರದಾಚೆ,ಒಮ್ಮೆ
ಕಣ್ಣು ಹಾಯಿಸಿ ನೋಡ
ಒಂದಾದಂತೆ ಕಾಣುವುದು
ಆಕಾಶ ಭೂಮಿ ಕೂಡ

ಸತ್ತ ಮಗನ ಮುಂದೆ ಕುಳಿತ
ಹೆಂಡತೀನ ನೋಡ
ಅಂದು ಬೇಂದ್ರೆ ಹಾಡಿದ
ನೀ ಹಿಂಗ ನೋಡಬೇಡ ಹಾಡ

ದಿಗ್ ದಿಗಂತದಾಚೆ ದೂರ,
ಸೇರದಿರು ನೀ ಯಾವ ತೀರ
ರಾಷ್ಟ್ರ ಕವಿ ಹೇಳ್ಯಾರ ನೋಡ
ಎಂದಿಗೂ ಕಟ್ಟಬ್ಯಾಡ ಗೂಡ

ಯಾಕಲೇ ಹಾಡ್ತಿದಿ ಮಾತ್
ಮಾತಿಗೆ ಇಂಗ್ಲಿಷ್ ಹಾಡ
ಮುತ್ತಿನಂತ ಹಾಡ
ಕನ್ನಡದಾಗ ಹಾಡ