Tuesday, 24 July 2012

ನೆನಪು


ಒಂದೇ ನೆನಪು ನೂರು ಬಾರಿ ಬಂದರೇನು?
ಸಾವಿರ ಕನಸುಗಳ ಹೊಳೆ ಹರಿಸಿದರೇನು ?
ನೆನಪುಗಳು ಕೇವಲ ನೆನಪುಗಳಷ್ಟೇ 

ಅಂತರಂಗದ ಕಡಲಲ್ಲಿ ಅಲೆಗಳಾಗಿ 
ತೊಯ್ಯಿದಾಡಿ ಭೋರ್ಗರೆದು ಅಬ್ಬರಿಸಿ 
ರಾಚುತಿಹುದು ಮನದ ಮೂಲೆ ಮೂಲೆಗೂ 

ಯಾರ ನೆನಪ ಕಲೆಯ ಕಪ್ಪೋ ?
ಯಾರು ಬಂದರು ತೊಳೆಯುತಿಲ್ಲ 
ಬಿಂಕದ ನೆನಪುಗಳು ಶೂನ್ಯ ಮನಸ್ಸಿನೊಳಗೆ 

ಯಾರ ನೆನಪು ಬಂದರೇನು
ಕೋಟಿಬಾರಿ? ನೆನಪೆಂಬ ಪುಟದಲ್ಲಿ 
ನೆನಪುಗಳು ಕೇವಲ ನೆನಪುಗಳಷ್ಟೇ 

ಅನುಪಮ ಎಸ್ ಗೌಡ 
ಆಲಕೆರೆ