Thursday, 17 May 2012

ಅರಸಿ-ಪ್ರೇಯಸಿ


ಅರಸಿ-ಪ್ರೇಯಸಿ 
*******************
ಎಂದೋ ಮರೆಯಾದ ಭಾವ
ಮತ್ತೆ ಮತ್ತೆ ಚಿತ್ತ ಸರಿಸಿ
ಅವಳತ್ತ ಸುಳಿದಾಡುತ್ತಿರೋ ನೋವು
ಒಲಿಯದ ಒಲವಿಗಾಗಿ ಒಂಟಿಯಾಗಿ
ಕಾದು ಘಾಸಿಗೊಂಡ ಹೃದಯದ ಮೇಲೆ
ಉಪ್ಪು ಸುರಿಯುವಂತಹ ಸಿಹಿ ನೆನಪುಗಳು

ಕತ್ತಲಲ್ಲಿ ಬರೆದ ಅರ್ಧ ಚಿತ್ರ
ಒರೆ ಕಣ್ಣು, ಸೊಟ್ಟ ಮೂಗು
ಮುಗುಳ್ನಗೆಯ ಒಣ ತುಟಿಗಳು
ಸಂಜೆ ಮಬ್ಬಲಿ ಕೆರೆಯ ಬಳಿ ಕುಳಿತು
ಕಿರುಬೆರಳಿಂದ ಕೈಯಲ್ಲಿ
ಕೆನ್ನೆತಾಕೋ ಮುಂಗುರುಳ ಸುತುತ್ತಾ
ದಡದಾಚೆ ಇರುವ ಅವನ ಕಾಯುತಿಹಳು ಈ ಅರಸಿ
ದಯಮಾಡಿ ಕೇಳದಿರೆನ್ನ ಯಾರೆಂದು ಆ ರೂಪಸಿ
ಅವಳೇ ಅವಳೇ ಅವನ ಬಹುಜನ್ಮದ ಪ್ರೇಯಸಿಅನುಪಮ ಎಸ್ ಗೌಡ 
    ಆಲಕೆರೆ