ವಿಶೇಷ ಏನು ಅಂದ್ರೆ, ಈ ದೇವಾಲಯವನ್ನು ವರ್ಷಕ್ಕೆ ಒಂದೇ ಬಾರಿ ಆಯುಧ ಪೂಜೆದಿನ ತೆಗೆಯಲಾಗುತ್ತದೆ,ಬೆಳಗಿನ ಜಾವ ಸುಮಾರು ೧೦ ಗಂಟೆ ಇಂದ ಮಧ್ಯರಾತ್ರಿ ಯ ವರೆಗೂ ತೆರೆದಿರುತ್ತದೆ ಆದಿವಸ. ಚಿಕ್ಕಯ್ಯ ನ ಬೆಟ್ಟದಲ್ಲಿ ಜಾತ್ರೆ ಕೂಡ ನಡುತ್ತದೆ ಈ ಸಮಯದಲ್ಲಿ. ಇಲ್ಲಿ ಬರಿಗಾಲಲ್ಲೇ ಬೆಟ್ಟ ಹತ್ತಬೇಕು ಅನ್ನೋ ಪ್ರತೀತಿ ಇದೆ, ಕಲ್ಲು ಮುಳ್ಳಿನ ದಾರಿಯನ್ನು ೨ ಕಿ ಮಿ ನಡೆದರೆ ಬೆಟ್ಟದ ಮೇಲಿರುವ ಪುಟ್ಟ ದೇವಾಲಯವನ್ನು ತಲುಪಬಹುದು, ಇಲ್ಲಿಗೆ ಬರುವ ಭಕ್ತರು ದೇವರಲ್ಲಿ ಶ್ರದ್ದೆ ಭಕ್ತಿ ಇಂದ ಬೇಡಿಕೊಂಡ ಹರಕೆ ಹೊತ್ತರೆ ರೋಗರುಜಿನಗಳನಿವಾರಣೆ, ಮಕ್ಕಳ ಭಾಗ್ಯ , ಕಷ್ಟ -ಕಾರ್ಪಣ್ಯಗಳ ನಿವಾರಣೆ ಆಗುತ್ತವೆ ಎಂಬ ನಂಬಿಕೆ ಇದೆ ಇಲ್ಲಿಗೆ ಬರುವ ಭಕ್ತರಲ್ಲಿ. ಸಮಸ್ಯೆ ಪರಿಹಾರ ಆದನಂತರ ಇಲ್ಲಿಗೆ ಬಂದು ಮಕ್ಕಳನ್ನು ತೊಟ್ಟಿಲಲ್ಲಿ ಇರಿಸು ಆ ತೊಟ್ಟಿಲ ನ್ನು ಹೊತ್ತು ಬೆಟ್ಟ ಕ್ಕೆ ನಡೆಯುವುದು , ಬಾಯಿಬೀಗ ಚುಚ್ಚಿಸಿ ಕೊಳ್ಳುವುದು , ಮುಡಿಕೊಟ್ಟು ಹರಕೆ ತೀರಿಸುವ ಪದ್ಧತಿ ಇಲ್ಲಿ ನಡೆಯುತ್ತದೆ.
ದೇವಾಲಯಕ್ಕೆ ಹೋಗುವದಾರಿಯಲ್ಲಿ ಸುತ್ತಲು ಸಿಗುವ ಸಣ್ಣ ಸಣ್ಣ ಬೆಟ್ಟಗಳ ಸಾಲನ್ನು ನೋಡಲು ಬಹಳ ಸುಂದರವಾಗಿದೆ
ಶಿವಳ್ಳಿ ಇಂದ ಸುಮಾರು ೧೫ ಕಿ ಮಿ ದೂರದಲ್ಲಿದೆ, ಮಂಡ್ಯ ಜಿಲ್ಲೆಯಲ್ಲೇ ಭುಗ ಕ್ಕೆ ಪ್ರಸಿದ್ದಿ ಆದ ಹುಲಿಕೆರೆ ಇಂದ ಕೇವಲ
೩ ಕಿ ಮಿ ದೂರದಲ್ಲಿದೆ ಅಲ್ಲಿಗೆ ಹೋಗುವ ದಾರಿಯಲ್ಲಿ ಕೆ ಅರ್ ಸ್ ಇಂದ ಹೊರ ಬರೋ ನೀರಿಗೆ ನಿರ್ಮಿಸಿರೋ ದೊಡ್ಡ ಕಾಲುವೆ ಅಂದ ನೋಡಲು ಕಣ್ಣೆರಡು ಸಾಲದು. ಹುಲಿಕೆರೆ ಒಂದು ಹಳ್ಳಿ ಪೂರ್ತಿಯಾಗಿ ಈ ಕಾಲುವೆಯ ಮೇಲೆ ಇದೆ. ಸುರಂಗ ಮಾರ್ಗದ ಮೂಲಕ ಆ ಹಳ್ಳಿಯ ಕೇಳ ಬಾಗದಿಂದ ಕಾಲುವೆಯನ್ನು ಮಾಡಿ ಕಾವೇರಿ ನೀರನ್ನು ಹೊರತಂದು (ಹುಲಿಕೆರೆ ಭುಗ ಎಂದು ಪ್ರಸಿದ್ದಿ ಪಡೆದಿದೆ ) ಕೆಳಭಾಗದ ರೈತರಿಗೆ ವ್ಯೆವಸಾಯಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ. ಈ ಭುಗ ಈಗ ಒಂದೆರಡು ಕಡೆ ಬಿರುಕು ಬಿಟ್ಟಿದೆ ಎಂದು ಶಿಥಿಲ ಕಾರ್ಯವನ್ನು ಆರಂಭ ಮಾದಲಾಗಿದೆ. ಕೆ ಅರ ಸ್ ನಲ್ಲಿ ನೀರು ನಿಲ್ಲಿಸಿದಾಗಿ ಈ ಸುರಂಗ ಮಾರ್ಗವನ್ನು ಸಂಪೂರ್ಣವಾಗಿ ನೋಡ ಬಹುದು.
-ನಗೆಮಲ್ಲಿಗೆ
No comments:
Post a Comment