*****************
ಅನಾದಿ ಕಾಲದಿಂದಲೂ
ಗದ್ದುಗೆಗಾಗಿ ಆಕಾಶ
ಭೂಮಿ, ಸಮುದ್ರ,
ಅತಳ ಪಾತಾಳ
ಸುತಳ ತಳತಳಗಳಲ್ಲಿ
ಹೋರಾಡಿದ ಧರ್ಮ,
ಧುರ್ಯೋಧನ, ಅಶೋಕ
ಸಮುದ್ರ ಗುಪ್ತತಾದಿ
ವೀರರುಗಳೆಲ್ಲ ಮಣ್ಣಲ್ಲಿ
ಮಣ್ಣಾಗಿಹೋದರು
ಇಂದು ಗಲ್ಲದ ಖಜಾನೆಗೆ
ಕೈ ಹಾಕಲು, ಗದ್ದಲದ
ಸದನದಲ್ಲಿ ಸದ್ದುಮಾಡೋ
ಶೂರಾದಿ ಶೂರರುಗಳೆಲ್ಲ (ರಾಜಕಾರಣಿಗಳು)
ಗದ್ದುಗೆಗೆ ಗೆದ್ದಲ ಹುಳುಗಳಂತೆ
ಹತ್ತಿ ಮಣ್ಣು ಮೆತ್ತಿಹರು
Anupama S Gowda

No comments:
Post a Comment