ಮತ್ತೆ ಬಂತು ಶ್ರಾವಣ
ಶುರುವಾಯಿತು ವರಗಳಿಗೆ
ಮಾಡಿಸುವ ವಧುಗಳ ದರ್ಶನ
ಎಲ್ಲೆಲ್ಲೂ ಸಿಂಗರಿಸಿರುವ
ಮದುವೆಯಾ ದಿಬ್ಬಣ
ನವಜೋಡಿಗಳಿಗೆ ಮಾಸದ
ಮುನಿಸ ಮುಸುಕ ಸರಿದಾಯಿತು
ಮತ್ತೆ ಬಂತು ಶ್ರಾವಣ
ವರಮಹಾಲಕ್ಷ್ಮಿ , ಗೌರಿ-ಗಣೇಶ,
ದುರ್ಗೆ ದಸರಗಳ ಆಗಮನ
ಕತ್ತಲೆಯ ಕಣದಲ್ಲಿ
ಹಚ್ಚೋ ದೀಪಾವಳಿಯ
ನೂತನ ದೀಪಗಳ ಅನಾವರಣ
ಮತ್ತೆ ಬಂತು ಶ್ರಾವಣ
ಚುಮು ಚುಮು ಚಳಿ ಮುಂಜಾನೆಯ
ವೇಳೆಯಲ್ಲಿ ಕೇಳುವುದು
ಗುಡಿ ಘಂಟೆಗಳ ಅನುರಣನ
ಚಿಟ ಪಟ ಮಳೆಯಲ್ಲಿ
ಗೀಳಿಡುವ ಪಕ್ಷಿ
ಸಂಕುಲದ ಇಂಪಾದ ಗಾನ
ಮತ್ತೆ ಬಂತು ಶ್ರಾವಣ
ಹೊರಗೆ ಮುಸುಕು , ಒಳಗೆ
ಬಿಗಿದಪ್ಪೋ ಬೆಚಗಿನ ಭಾವ
ಬಲು ಹಿತವಾದ ವಾತಾವರಣ
ಮತ್ತೆ ಬಂತು ಶ್ರಾವಣ
ಹೊತ್ತು ತಂತ್ತು ಮನೆ ಮನಗಳಿಗೂ
ಹಬ್ಬ ದಿಬ್ಬಗ ಹಸಿರ ತೋರಣ.
Anupama S Gowda
.jpg)
No comments:
Post a Comment