ಕಾತುರದಿಂದ ಪುಳಕಗೊಂಡಿದ್ದೇನೆ
ನಿನ್ನ ಎದುರುಗುಳ್ಳುವ ಕ್ಷಣಗಣನೆಯಲ್ಲಿ
ಕೊನೆ ಬಾರಿಗೆ ಮಡಿವಂತಿಕೆಯ ಮನಸ್ಸಿನ
ಮಡಿಲಲ್ಲಿ ನಿನ್ನ ಮುದ್ದಾಡೋ ಹಂಬಲದಲ್ಲಿ
ಮೂಡಣದಿ ಸಾಗುತ್ತಿದೆ....
ಎನ್ನ ಕನಸುಗಳ ಜೀವಂತ ಶವದ ಮೆರವಣಿಗೆ
ಪಡುವಣಕ್ಕೆ ನೀ- ಬೆನ್ನು ಮಾಡಿ ಹೊರಟೆಯ
ಹೇಳು ನೀ ಮತ್ತೆ ಮರಳಿ ಬರುವೆಯಾ...?!?
ಮೌನದಲ್ಲೂ ಚೀತ್ಕಾರವಿದೆ
ಮನವೇ.... ದೂರ ಸರಿಯದಿರು ದೊರೆಮಗನೆ
ನೀಯಾರೆನಗೆ ?? ಸರಿಯುವ ಮುನ್ನ ಉತ್ತರಿಸು
ನೀ ಮತ್ತೆ ಮರಳಿ ಬರುವೆಯಾ...?!?
ಪ್ರಶ್ನೆಗಳ ಸರದಿ ಸಾಲು
ಹಚ್ಚಿಕೊಂಡಿದ್ಯಾಕೆ..???ಮೆಚ್ಚಿಕೊಂ ಡಿದ್ಯಾಕೆ...??
ಎಡವಿದೆಲ್ಲಿ...???? ಜಾರಿದೆಲ್ಲಿ...???
ಬಿಸಿಲು-ಮಳೆ, ಗುಡುಗು-ಸಿಡಿಲು..ಸಹಿಸಲಾರೆ
ಕಸಿವಿಸಿಗೊಂಡಿದ್ದೇನೆ-ಇನಿಯ
ಹಚ್ಚಿಕೊಂಡಿದ್ಯಾಕೆ..???ಮೆಚ್ಚಿಕೊಂ
ಎಡವಿದೆಲ್ಲಿ...???? ಜಾರಿದೆಲ್ಲಿ...???
ಬಿಸಿಲು-ಮಳೆ, ಗುಡುಗು-ಸಿಡಿಲು..ಸಹಿಸಲಾರೆ
ಕಸಿವಿಸಿಗೊಂಡಿದ್ದೇನೆ-ಇನಿಯ
ನೀ ಮರಳಿ ಮುಖಾಮುಖಿಯಾಗುವೆಯಾ...????
ಮನಸ್ಸು ಮತ್ತೆ ಮತ್ತೆ ಕೆಳುತ್ತಿದೆ ಇನಿಯಾ
ಬರುವುದಾದರೆ ಹೇಳೊ ನಾ ಮನಸ್ಸು ಬದಲಿಸಿ
ಮನಸ್ಸು ಮತ್ತೆ ಮತ್ತೆ ಕೆಳುತ್ತಿದೆ ಇನಿಯಾ
ಬರುವುದಾದರೆ ಹೇಳೊ ನಾ ಮನಸ್ಸು ಬದಲಿಸಿ
ನಾ ತೊಟ್ಟ ಬಳೆಗಳು ಚೂರಾಗುವ ಮುನ್ನ
ಬೇಗ ಹೇಳು ಚಿನ್ನ ನೀ.............
ಬೇಗ ಹೇಳು ಚಿನ್ನ ನೀ.............
ಮತ್ತೆ ಮರಳಿ ಬರುವೆಯಾ...?!? ಕಾಯುತ್ತಿರುತ್ತೇನೆ
Anupama S Gowda
Alakere
.jpg)
No comments:
Post a Comment