ಎತ್ತ ಹೋದೆಯೋ ನೀನು
ಮತ್ತೆ ಬರದಾದೆಯೋ
ಸುತ್ತುತಿಹುದು ನನ್ನ ಮನವು
ನಿನ್ನ ಚಿತ್ತದಲ್ಲೇ ಇಂದು
ದೂರದೊಂದು ಊರಿನಿಂದ
ಪಾರಿಜಾತ ಹೊತ್ತು ಬಂತು
ನಿನ್ನ ಓಲೆ ಹಾರಿ ತಂತು
ಮೌನದಲ್ಲಿ ಚೀರೋ ಎದೆಯ
ನೋವ ಹೇಳಲಾರೆ ತಾಳಲಾರೆ
ನೀರಿನಲ್ಲಿ ಒಂಟಿತಾರೆ
ಸೂರ್ಯಕಾಂತಿಗೆ ಸೋತು
ನಾಚುತಿಹುದು ಅದರ ಮೂರೇ
ಕತಲಲ್ಲಿ ಕಾಯುತಿಹಳು ಯಾರೋ
ದಡದಲ್ಲಿ ಕುಳಿತ ನೀರೇ
ಕಾಣದೊಂದು ಕಂಪಿನಿಂದ
ತೇಲಿಬಂದ ಮಧುರ ನೋವ
ಯಾವ ಋತುವಿನಲ್ಲಿ ಮಿಂದ
ನೆನಪೋ ಮೀಟುತಿಯುಹುದು
ಮನದ ಭಾವ, ದಾಟುತಿಹುದು
ದಾಟುತಿಹುದು ಒಲುಮೆ ಕಡಲ
Anupama.s Gowda
Alakere

No comments:
Post a Comment