Monday, 13 March 2017

ನಿಸರ್ಗವರುಷದಿಂ ವರುಷಕೆ
ಮಳೆ ಕಡಿಮೆಯಾಗುತಿರೆ
ದಿವಸದಿಂ ದಿವಸಕೆ
ಇಳೆ ಒಣಗಿ ಬಾಯ್ಬಿಟ್ಟು ಗೋಳಿಡುತಿರೆ

ಹಸಿರುಟ್ಟ ಗಿರಿವನಗಳಂ ಕಡಿದು
ಬೃಹದಾಕಾರದ ಕಟ್ಟಡಗಳಂ ಕಟ್ಟಿ
ಬಣ್ಣ ಬಣ್ಣದ ಬಟ್ಟೆಗಳನ್ ತೊಡಿಸಿದೊಡೆ
ನೀ ಮಾಡಿಟ್ಟಿಹ ಮದ್ದು-ಗುಂಡುಗಳನುಂಡು
ಬದುಕಲಾದಿತೆ ಹೇಳು !?

ಬರಿದಾದ ಕಾಡುಮೇಡುಗಳತೊರೆದು
ಬಯಲಿಗೆ ಬಂದ ಪ್ರಾಣಿ ಪಕ್ಷಿಗಳು ಗೀಳಿಡುತಿರೆ.....ದಕ್ಕೀತೆ ಜಯ ?
ಇನ್ನಾದರೂ ಮರಗಿಡಗಳನುಳಿಸಿ  ನಿಸರ್ಗವನುಳಿಸು....

ಕಿವಿಮಾತಲ್ಲವೋ ಮೂಢ ಇದು ಕೊನೆಮಾತು.

-ನಗೆಮಲ್ಲಿಗೆ