Wednesday, 28 January 2015

ನೀ ಹೊರಟ ನಂತರವೂ :

ನೀ ಹೊರಟ ನಂತರವೂ 
ಗಾಳಿ,ನೀರು,ನೆಲ,
ಆಕಾಶ ಎಲ್ಲವೂ 
ಮೊದಲು ಇದ್ದಹಾಗೆ ಇವೆ 

ನನ್ನ ಹೃದಯದ ಕೋಣೆ 
ಮಾತ್ರ ಕಳೆಗುಂದಿ 
ನೆನಪುಗಳ ಹೊಡೆತಕ್ಕೆ ನಲುಗಿ 
ಹಾಳು ಹಂಪೆಯಂತಾಗಿದೆ

ನೀ ಹೊರಟ ನಂತರವೂ
ಮುಂಜಾನೆ ಮುಸಂಜ್ಜೆ , ಹಗಲು 
ರಾತ್ರಿ, ಸೂರ್ಯ ಚಂದ್ರ ಎಲ್ಲವೂ 
ಮೊದಲು ಇದ್ದಹಾಗೆ ಇವೆ 

ನನ್ನುಸಿರಿನ ನೆಲಮಾತ್ರ 
ಭೀಕರಬರಗಾಲ ಬಡಿದಂತೆ 
ಬಿಸಿಗಾಳಿಯಲಿ ಬಳಲಿ
ಮನವನ್ನೆಲ್ಲಾ ಬಿರುಕುಗೊಳಿಸಿದೆ 

ನೀ ಹೊರಟ ನಂತರವೂ
ಪಾರ್ಕಿನ ಮರ-ಬೆಂಚುಗಳು ಯತಾಪ್ರಕಾರ
ಬಂದು ಕೂತರಿಗೆ ನೆರಳುನೀಡಿ 
ಆಯಾಸ ವಿಲ್ಲದೆ ಅವರ ಹೊರುತ್ತಿವೆ 

ನನ್ನ ಕನಸುಗಳು ಮಾತ್ರ ಹುಚ್ಚು 
ಹಿಡಿದ ಫಕೀರನಂತೆ ನಿನ್ನನೆಸರನ್ನೇ 
ಬಡಬಡಿಸುತ್ತಾ ಭೂತದ ಭ್ರಮೆಯಿಂದ 
ಹೊರಬರಲಾಗದೆ ಚೀರುತ್ತಿವೆ. -ನಗೆಮಲ್ಲಿಗೆ