Monday 8 December 2014

ಕವನ - ಚಂದಿರ

ಇಂದಿನ ಪಂಜುವಿನಲ್ಲಿ (ಅಂತರ್ಜಾಲ ಪತ್ರಿಕೆ ) ಪ್ರಕಟವಾದ ನನ್ನ  ಒಂದು ಕವನ , ಧನ್ಯವಾದಗಳು ಪಂಜು ಬಳಗಕ್ಕೆ 
೧. ಕೊಳಕ್ಕೆ
ಎಸೆದ ಕಲ್ಲುಗಳು
ಈಜುತಿದ್ದ ಚಂದಿರನ
ಏಕಾಂತವನ್ನು
ಭಗ್ನಗೊಳಿಸಿದೆ 

೨. ಒಡೆದ ಕನ್ನಡಿ;
ಬೇಲಿ ಅಂಚಲ್ಲಿ
ಚಂದಿರ ಚೂರಾಗಿ
ಬಿದ್ದಿಹನು  
೩. ರಾತ್ರಿ ಬೆನ್ನ ಹಿಂದೆ
ಬಿದ್ದ ಚಂದಿರ
ಅಪ್ಪನ ಕರೆದ ತಕ್ಷಣ
ಬೆಟ್ಟದ ಹಿಂದೆ
ಅಡಗಿ ಕುಳಿತ
೪. ಕೊಡಕ್ಕೆ ಹಗ್ಗ ಕಟ್ಟಿ
ಕೆಳಗಿಳಿಸಿ,
ಮೇಲೆತ್ತಬೇಕು;
ಬಾವಿಗೆ ಬಿದ್ದ
ಚಂದಿರನ
ಬದುಕಿಸಲು.
೫. ಚಳಿಯ ಹೊಡೆತಕ್ಕೆ
ಚಂದ್ರನು ಮೋಡದ
ಹೊದಿಕೆಯಲಿ
ಅವಿತು ಕುಳಿತಿದ್ದಾನೆ
೬. ಹಸಿದ ಹೊಟ್ಟೆ ಈಗ
ಚಂದ್ರನನ್ನೇ
ಮುರಿದು ತಿನ್ನು
ಎನ್ನುತಿದೆ 
 ೭. ಅಂದಕ್ಕೆ ಸೋತು
ಮೀನುಗಳು ಬಿಡದೆ
ಮುತ್ತಿಡುತಿವೆ
ಚಂದಿರ ಬಿಂಬಕ್ಕೆ 
-ನಗೆಮಲ್ಲಿಗೆ 

No comments:

Post a Comment