Tuesday 8 May 2012

ಸರ್ ಎಂ ವಿ ವಿಶ್ವೇಶ್ವರೈಯ್ಯ


ಸರ್ ಎಂ ವಿ  ವಿಶ್ವೇಶ್ವರೈಯ್ಯ
ಈ ಸೀಮೆಗೆ ಶಿವ ನೀಡಿದ ವರವೋ 
ಈ ಊರಿಗೆ ಇವ ಆಲದ ಮರವೋ 
ನಮ್ಮ ನಾಡಿನ ಅನ್ನದಾತ, ಬಿಸಿಲಿನಲ್ಲ್ಲಿ ಒಣಗಿ ಬಯಲು ಸೀಮೆಯಾಗುತಿದ್ದನಮ್ಮ ಮಂಡ್ಯ ನಾಡನ್ನು ,  ಹಚ್ಚ ಹಸುರಿನ ಪಚ್ಚೆತೆನೆಯ ಸೀಮೆಯನ್ನಾಗಿಸಿದ ನಮ್ಮ ಕುಲದೈವ ಸರ್ ಎಂ ವಿ  ವಿಶ್ವೇಶ್ವರೈಯ್ಯ. ಪುರಾಣ, ಕಥೆಗಳಲ್ಲಿ ಬರೋ ದೇವರು ಕೇವಲ ನಂಬಿಕೆ ಅಸ್ಟೆ.....ಅದು ಸ್ವರ್ಗ, ನರಕಗಳ ಕಲ್ಪನೆ ರೀತಿ ನಮ್ಮ ಡಿ ವಿ ಜಿ ಅವರು ಹೇಳೋತ್ರ ಹೋದವರೇ ಎಲ್ಲ ತಿರುಗಿ ಬಂದವರು ಯಾರು ಇಲ್ಲ, ಹಾಗೆ ರಾಮ, ಕೃಷ್ಣ, ಶಿವ ಮುಕ್ಕೋಟಿ ದೇವರುಗಳೆಲ್ಲ ಕೇವಲ ಕಲ್ಪನೆ ಅಸ್ಟೆ, ಅವರವರ ಭಾವನೆ, ನಂಬಿಕೆಗಳಿಗೆ ಬಿಟ್ಟದ್ದು.ಆದರೆ ಈತ ಕಣ್ಣಾರೆ ಕಂಡ ದೇವರು, ಕನ್ನಡಾಂಬೆಯಾ ಹೆಮ್ಮೆಯ ಪುತ್ರ,ನಮ್ಮೊರಿನ ಕಳಸ, ಮಣ್ಣಿನ ಮಗ, ರೈತ ಸಮುದಾಯದ ಉತ್ತುಂಗದ ಶಿಖರ, ಮನೆದೇವರು ಇಂತಹ ಮಹಾತ್ಮನನ್ನು ಪಡೆದ ನಾವುಗಳು ಎಂದೆಂದಿಗೂ ಇವರ ಆರಾಧಕರು. ಜೈ ಹಿಂದ್ ಜೈ ಕರ್ನಾಟಕ ಮಾತೆ.

ಅನುಪಮ ಎಸ್ ಗೌಡ 
  ಆಲಕೆರೆ

No comments:

Post a Comment